Publish Date: Fri, 27 May 2022 (11:30 IST)
Updated Date: Fri, 27 May 2022 (11:36 IST)
ಕಲಬುರಗಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಕೊಲೆ ಮಾಡಿದ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಎರಡು ದಿನದ ಹಿಂದೆ ವಿಜಯ್ ಕಾಂಬಳೆ ಎಂಬ ಯುವಕನ ಕೊಲೆಯಾಗಿತ್ತು. ಈತ ಮುಸ್ಲಿಂ ಯುವತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಯ ಸಹೋದರ, ಸಂಗಡಿಗರೊಂದಿಗೆ ಸೇರಿಕೊಂಡು ಕೊಲೆ ಮಾಡಿ ಪರಾರಿಯಾಗಿದ್ದ.
ಇದೀಗ ಯುವತಿಯ ಸಹೋದರ ಮತ್ತು ಇನ್ನೊಬ್ಬಾತನನ್ನು ಬಂಧಿಸಲಾಗಿದೆ. ಇದೀಗ ಪೊಲೀಸರು ಇವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.