Select Your Language

Notifications

webdunia
webdunia
webdunia
webdunia

ಕಳ್ಳತನ ಮಾಡಿದ ಮೇಲೆ ಐ ಲವ್ ಯೂ ಬರೆದು ಪರಾರಿಯಾದ ಖದೀಮ!

ಕಳ್ಳತನ ಮಾಡಿದ ಮೇಲೆ ಐ ಲವ್ ಯೂ ಬರೆದು ಪರಾರಿಯಾದ ಖದೀಮ!
ಪಣಜಿ , ಗುರುವಾರ, 26 ಮೇ 2022 (09:10 IST)
ಪಣಜಿ: ಕಳ್ಳತನ ಮಾಡಲು ಬಂದ ಕಳ್ಳ ಮಾಲು ಸಮೇತ ಎಸ್ಕೇಪ್ ಆಗುವ ಮೊದಲು ಮನೆಯ ಟಿವಿಯೊಳಗೆ ಐ ಲವ್ ಯೂ ಎಂದು ಮಾಲಿಕನಿಗೆ ಬರೆದು ಪರಾರಿಯಾಗಿದ್ದಾನೆ.

ಗೋವಾದಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಐಷಾರಾಮಿ ಬಂಗಲೆಯೊಂದಕ್ಕೆ ನುಗ್ಗಿದ್ದ. ಬಳಿಕ ಮನೆಯಲ್ಲಿದ್ದ ಸುಮಾರು 20 ಲಕ್ಷ ಮೌಲ್ಯದ ನಗ-ನಗದು ದೋಚಿದ್ದಾನೆ. ಹೋಗುವ ಮುನ್ನ ಟಿವಿ ಮೇಲೆ ಮನೆ ಮಾಲಿಕನಿಗೆ ಐ ಲವ್ ಯೂ ಎಂದು ಬರೆದು ಪರಾರಿಯಾಗಿದ್ದಾನೆ.

ವಿಲಕ್ಷಣ ಕಳ್ಳನ ವಿರುದ್ಧ ಮನೆ ಮಾಲಿಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ