Select Your Language

Notifications

webdunia
webdunia
webdunia
webdunia

Nandini:ನಂದಿನಿ ಹಾಲಿಗೆ 5 ಅಲ್ಲ, ಇಷ್ಟು ರೂಪಾಯಿ ಹೆಚ್ಚಳವಾಗುವ ಸಾಧ್ಯತೆ

Nandini Milk

Krishnaveni K

ಬೆಂಗಳೂರು , ಸೋಮವಾರ, 24 ಮಾರ್ಚ್ 2025 (15:25 IST)
Photo Credit: X
ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಗೆ ಕೆಎಂಎಫ್ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯೂ ನಡೆಯಲಿದೆ. ಆದರೆ ನಂದಿನಿ ಹಾಲಿಗೆ ಹೆಚ್ಚಳವಾಗಲಿರುವುದು 5 ರೂ. ಅಲ್ಲ, 3 ರೂಪಾಯಿ ಎನ್ನಲಾಗುತ್ತಿದೆ.

ನಂದಿನಿ ಹಾಲಿನ ದರವನ್ನು 5 ರೂ.ಗೆ ಏರಿಕೆ ಮಾಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಈಗಾಗಲೇ ಹಾಲು ಒಕ್ಕೂಟಗಳು ಸರ್ಕಾರಕ್ಕೆ ದರ ಹೆಚ್ಚಳಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರ ಇದುವರೆಗೆ ತೀರ್ಮಾನ ತೆಗೆದುಕೊಂಡಿರಲಿಲ್ಲ.

ಇಂದು ಸಿಎಂ ಜೊತೆಗಿನ ಸಭೆಯಲ್ಲಿ ತೀರ್ಮಾನವಾಗಲಿದೆ. ಆದರೆ ಇಷ್ಟು ದಿನ ಇದ್ದಂತೆ ಪ್ರತೀ ಲೀಟರ್ ಗೆ 5 ರೂ. ಹೆಚ್ಚಳವಾಗಲ್ಲ. ಬದಲಾಗಿ ಸದ್ಯಕ್ಕೆ 3 ರೂ.ಗೆ ಹೆಚ್ಚಳ ಮಾಡಲು ಕೆಎಂಎಫ್ ಮನವಿ ಮಾಡಿದೆ ಎನ್ನಲಾಗಿದೆ.

ಇದನ್ನು ಸಿಎಂ ಬಹುತೇಕ ಪುರಸ್ಕರಿಸುವ ಸಾಧ್ಯತೆಯಿದ್ದು, ನಂದಿನಿ ಹಾಲಿನ ದರ 3 ರೂ. ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಎಷ್ಟೇ ಆಗಿದ್ದರೂ ಇತ್ತೀಚೆಗಷ್ಟೇ ಬಸ್, ಮೆಟ್ರೋ, ವಿದ್ಯುತ್ ದರ ಏರಿಕೆ ನಡುವೆ ಈಗ ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಗ್ಯಾರಂಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿಂಗಳಿಗೆ 12 ರಿಂದ 15 ಲಕ್ಷ ಸಂಬಳ ಆಂಬ್ಯುಲೆನ್ಸ್ ಗೆ ದಾನ ಮಾಡ್ತಿದ್ದೀನಿ: ಪ್ರದೀಪ್ ಈಶ್ವರ್