ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ವಿಚಾರ ಚರ್ಚೆಯಲ್ಲಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಇಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಭೇಟಿ ಮಾಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೇಟಿಯ ಉದ್ದೇಶವೇನೆಂದು ಬಹಿರಂಗಪಡಿಸಿದ್ದಾರೆ. ಇದು ರಾಜಕೀಯ ವಿಚಾರಕ್ಕೆ ಆದ ಭೇಟಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದೇವೆ. ಭದ್ರಾ ಜಲಾಶಯ ಕರ್ನಾಟಕ ನೀರಾವರಿ ನಿಗಮದಲ್ಲಿದೆ. ಒಟ್ಟು 1 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಅದನ್ನು ವಿಜೆನಲ್ಲಿ ವಿಶ್ವೇಶ್ವರಯ್ಯದ್ದಕ್ಕೆ ಸೇರಿಸಲು ಹೊರಟಿದ್ದಾರೆ. ಅದಕ್ಕೆ ನಾನು ವಿನಂತಿ ಮಾಡಿದ್ದೇನೆ, ವಿಜೆಗೆ ಸೇರಿಸಬೇಡಿ, ಕರ್ನಾಟಕ ನೀರಾವರಿ ನಿಗಮದಲ್ಲೇ ಇರಲಿ ಎಂದು ಮನವಿ ಮಾಡಿದ್ದೇನೆ. ಭದ್ರಾ ಜಲಾಶಯನ ನಮ್ಮ ದಾವಣಗೆರೆಯ ಹಕ್ಕು ಎಂದು ಡಿಸಿಎಂಗೆ ಹೇಳಲು ಭೇಟಿ ಮಾಡಿದ್ದೆ.
ಅವರು ನನ್ನ ಮನವಿಯನ್ನು ಕೇಳಿದ್ದಾರೆ. ಸಂತೋಷದಿಂದಲೇ ಮಾತನಾಡಿಸಿದ್ದಾರೆ. ನಾನು ಅವರು 20 ನಿಮಿಷ ಮಾತನಾಡಿದ್ದೇವೆ. ಆಯ್ತು, ಪರಿಶೀಲನೆ ಮಾಡ್ತೀವಿ ಎಂದಿದ್ದಾರೆ. ಇದರ ಹೊರತು ಬೇರೆ ರಾಜಕೀಯ ಏನೂ ಮಾತನಾಡಿಲ್ಲ. ಮುಂದೆ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡ್ತೇನೆ ಎಂದಿದ್ದಾರೆ.