Daily Horoscope

Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಸಾವನ್ನಪ್ಪಿದ್ದ ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಪುತ್ರಿ ಬಗ್ಗೆ ಸರ್ಕಾರದ ಮಹತ್ವದ ತೀರ್ಮಾನ

Mahantesh Bilagi
ಬೆಂಗಳೂರು: ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ್ದ ದಕ್ಷ ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಅವರ ಪುತ್ರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಇದಕ್ಕೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ನಾಡು ಕಂಡ ಶ್ರೇಷ್ಠ ಐಎಎಸ್ ಅಧಿಕಾರಿಗಳಲ್ಲಿ ಮಹಂತೇಶ ಬೀಳಗಿ ಕೂಡಾ ಒಬ್ಬರು. ಇತ್ತೀಚೆಗೆ ಅವರು ಸಂಬಂಧಿಕರ ಮದುವೆಗೆ ಹೋಗಿ ಬರುವಾಗ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಸಾವಿಗೆ ಜನ ಕಂಬನಿ ಮಿಡಿದಿದ್ದರು.

ಮಹಂತೇಶ ಬೀಳಗಿ ಬಡತನದಿಂದ ಮೇಲೆ ಬಂದವರು. ಕಷ್ಟಪಟ್ಟು ಐಎಎಸ್ ಅಧಿಕಾರಿಯಾದವರು. ಅಧಿಕಾರಿಯಾದ ನಂತರವೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಸಹೃದಯ ಅಧಿಕಾರಿಯಾಗಿದ್ದರು. ಹೀಗಾಗಿ ಅವರ ಸಾವಿನ ನಂತರ ಅವರ ಕುಟುಂಬಸ್ಥರಿಗೆ ಸರ್ಕಾರ ಉದ್ಯೋಗ ನೀಡಲಿ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದರು.

ಇದೀಗ ಜನರ ಆಸೆಯನ್ನು ಸರ್ಕಾರ ಈಡೇರಿಸಲು ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಂತೇಶ ಬೀಳಗಿ ಪುತ್ರಿಗೆ ಅನುಕಂಪದ ಆಧಾರದಲ್ಲಿ ಸಿ ದರ್ಜೆಯ ಸರ್ಕಾರಿ ನೌಕರಿ ನೀಡಲು ಅನುಮೋದನೆ ನೀಡಲಾಗಿದೆ. ಆ ಮೂಲಕ ಮಹಂತೇಶ ಬೀಳಗಿಯವರ ಅಕಾಲಿಕ ನಿಧನದಿಂದ ಸಂಕಷ್ಟಕ್ಕೀಡಾಗಿದ್ದ ಕುಟುಂಬಕ್ಕೆ ನೆರವಾಗಲು ಮುಂದೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಸಿಎಂ ಹುದ್ದೆ ನಿರ್ಧಾರವಾಗಬೇಕಾದ್ರೆ ಇವರೊಬ್ಬರು ಬರಬೇಕು