ಪತಿ ತೀರಿಕೊಂಡ ಬಳಿಕ ಮಹಿಳೆಯರು ಆರ್ಥಿಕವಾಗಿ ದುರ್ಬಲರಾಗದಂತೆ ಸರ್ಕಾರ ವಿಧವಾ ವೇತನ ನೀಡುತ್ತದೆ. ವಿಧವಾ ವೇತನಕ್ಕೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಲು ಏನು ಮಾಡಬೇಕು, ಎಷ್ಟು ರೂಪಾಯಿ ಸಿಗುತ್ತದೆ ಇಲ್ಲಿದೆ ವಿವರ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ಯಾವುದೇ ಸರ್ಕಾರೀ ಸೇವೆಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಬೇಕು. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲೂ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ವಿಧವಾ ವೇತನದಲ್ಲಿ ಪತಿ ಕಳೆದುಕೊಂಡ ಮಹಿಳೆಯರಿಗೆ ಮಾಸಿಕ 8,00 ರೂ. ಪೆನ್ಷನ್ ಸಿಗುತ್ತದೆ.
ಏನೆಲ್ಲಾ ದಾಖಲೆಗಳು ಬೇಕು
-ಪತಿಯ ಮರಣ ನೋಂದಣಿ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಾಸ ಸ್ಥಳ ದಾಖಲಾತಿ ಪತ್ರ
-ಫೋಟೋ
ಯಾರು ಅರ್ಹರು?
-ಕರ್ನಾಟಕದ ನಿವಾಸಿಯಾಗಿರಬೇಕು.
-ಬಿಪಿಎಲ್ ಕಾರ್ಡ್ ದಾರರಾಗಿರಬೇಕು.
-ಇತರೆ ಯಾವುದೇ ಪೆನ್ಷನ್ ಪಡೆಯುತ್ತಿರಬಾರದು
ಅರ್ಜಿ ಸಲ್ಲಿಸುವುದು ಹೇಗೆ?
-ಸೇವಾ ಸಿಂಧು ಪೋರ್ಟಲ್ ವೆಬ್ ಸೈಟ್ ಗೆ ಹೋಗಿ.
-ಹೊಸ ಬಳಕೆದಾರರಾಗಿದ್ದರೆ ರಿಜಿಸ್ಟರ್ ಆಗಿ ಲಾಗಿನ್ ಆಗಿ. ಈಗಾಗಲೇ ದಾಖಲಾಗಿದ್ದರೆ ಲಾಗಿನ್ ಮಾಹಿತಿ ನೀಡಿ ಲಾಗಿನ್ ಆಗಿ.
-ವಿಡೋ ಪೆನ್ಷನ್ ಎನ್ನುವ ಆಯ್ಕೆ ಕ್ಲಿಕ್ ಮಾಡಿ.
-ಅಲ್ಲಿರುವ ಅರ್ಜಿಯಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ತುಂಬಿ. ನಂತರ ಕೇಳಲಾಗುವ ದಾಖಲೆಗಳನ್ನು ಅಪ್ ಲೋಡ್ ಮಾಡಿ.
-ಅರ್ಜಿಯನ್ನು ತುಂಬಿ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ. ನಿಮ್ಮ ರೆಫರೆನ್ಸ್ ನಂಬರ್ ಪಡೆದುಕೊಳ್ಳಿ. ಇದನ್ನು ಬಳಸಿ ಮುಂದೆ ನಿಮ್ಮ ಅರ್ಜಿಯ ಸ್ಥಿತಿಗತಿ ಅರಿಯಬಹುದು.