ಬೆಂಗಳೂರು: ಶಿಕ್ಷಣ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜಾತಿ ಸರ್ಟಿಫಿಕೇಟ್ ತುಂಬಾ ಮುಖ್ಯವಾಗುತ್ತದೆ. ಜಾತಿ ಸರ್ಟಿಫಿಕೇಟ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಇಲ್ಲಿದೆ ವಿವರ.
ಯಾವೆಲ್ಲಾ ದಾಖಲೆಗಳು ಬೇಕು?
-ಆಧಾರ್/ವೋಟರ್ ಐಡಿಯಂತಹ ಐಡಿ ಪ್ರೂಫ್
-ವಿಳಾಸ ಪ್ರೂಫ್ (ರೇಷನ್ ಕಾರ್ಡ್/ವಿದ್ಯುತ್ ಬಿಲ್)
-ಜಾತಿ/ಸಮುದಾಯದ ಪ್ರೂಫ್ (ಹಿಂದಿನ ಜಾತಿ ಸರ್ಟಿಫಿಕೇಟ್ ಇದ್ದರೆ, ಅಥವಾ ಶಾಲಾ ದಾಖಲಾತಿ)
-ತಂದೆ/ ಕುಟುಂಬದ ಜಾತಿ ಪ್ರೂಫ್
-ಕರ್ನಾಟಕದಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಜಾತಿ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸಬಹುದು.
-ಪೋರ್ಟಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್/ಈಮೇಲ್ ವಿವರ ನೀಡಿ ಲಾಗಿನ್ ಆಗಿ.
-ನ್ಯೂ ರಿಕ್ವೆಸ್ಟ್ ಆಯ್ಕೆ ಕ್ಲಿಕ್ ಮಾಡಿ ಮತ್ತು ಕಾಸ್ಟ್ ಸರ್ಟಿಫಿಕೇಟ್ ಆಯ್ಕೆ ಮಾಡಿ.
-ಹೆಸರು, ತಂದೆಯ ಹೆಸರು, ವಿಳಾಸ,ಜಾತಿ, ಉಪಜಾತಿ ಸೇರಿದಂತೆ ಎಲ್ಲಾ ವಿವರಗಳನ್ನು ನೀಡಿ.
-ಅಲ್ಲಿ ಕೇಳಲಾಗುವ ದಾಖಲೆಗಳನ್ನು ಅಪ್ ಲೋಡ್ ಮಾಡಿ ಅಪ್ಲೈ ಮಾಡಿ.
-ಗೂಗಲ್ ಪೇ, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಬಳಸಿ ಆನ್ ಲೈನ್ ಮೂಲಕವೇ ಪಾವತಿ ಮಾಡಬಹುದು.
-ಕೊನೆಯಲ್ಲಿ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ ಎಸ್ಎಂಎಸ್ ಮೂಲಕ ಸ್ವೀಕೃತಿ ನಂಬರ್ ಪಡೆಯಿರಿ.