ನವದೆಹಲಿ: ಅಧಿಕಾರ ಹಂಚಿಕೆ ಫೈಟ್ ನಡುವೆ ದೆಹಲಿಯಲ್ಲಿ ನಿನ್ನೆ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯು ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ಅಧಿಕಾರ ಹಂಚಿಕೆ ಬಗ್ಗೆ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ನಿನ್ನೆ ಮತಗಳ್ಳತನ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದರು.
ದೆಹಲಿಗೆ ಹೋಗಿದ್ದ ಅವರು ಇದರ ನಡುವೆಯೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಪ್ರತಿಭಟನಾ ಸಮಾವೇಶದ ಬಳಿಕ ಔತಣಕೂಟಕ್ಕೆ ಡಿಕೆ ಶಿವಕುಮಾರ್ ಗೂ ಆಹ್ವಾನ ನೀಡಲಾಗಿತ್ತು. ವಿಶೇಷವೆಂದರೆ ಈ ಔತಣಕೂಟಕ್ಕೆ ಡಿಕೆಶಿ ಹಾಜರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಗೈರಾಗಿದ್ದಾರೆ.
ಈ ಭೇಟಿಯ ನಡುವೆ ಕೆಲವು ಹೊತ್ತು ಸೋನಿಯಾ, ರಾಹುಲ್ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ವಿವರವೇನೆಂದು ಬಹಿರಂಗಪಡಿಸಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ.