ಬಾಬಾ ವಂಗಾ ಭವಿಷ್ಯ ವಾಣಿಯ ಪ್ರಕಾರ 2026 ರಲ್ಲಿ ಕೆಲವು ಭಯಾನಕ ವಿಚಾರಗಳು ನಡೆಯಲಿವೆ. ಬಾಬಾ ವಂಗಾ ಭವಿಷ್ಯ ವಾಣಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಮುಂದೆ ನಡೆಯಲಿರುವ ವಿಚಾರಗಳನ್ನು ಬಾಬಾ ವಂಗಾ ಭವಿಷ್ಯವಾಣಿ ಕರಾರುವಾಕ್ ಆಗಿ ಹೇಳುತ್ತದೆ.
ಅದರಂತೆ 2026 ರಲ್ಲಿ ಪ್ರಪಂಚದಲ್ಲಿ ಹಲವು ಪ್ರಮುಖ ವಿಚಾರಗಳು ನಡೆಯಲಿವೆ. ಬಾಬಾ ವಂಗಾ ಭವಿಷ್ಯ ವಾಣಿ ಪ್ರಕಾರ 2026 ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಃಪತನವಾಗಲಿದೆ. ಮೂರನೇ ಮಹಾಯುದ್ಧ ನಡೆಯುವ ಸಂಭವವೂ ಇಲ್ಲದಿಲ್ಲ.
2026 ರಲ್ಲಿ ಪ್ರಪಂಚದಲ್ಲಿ ಹಲವು ಅಸ್ಥಿರತೆ, ಬದಲಾವಣೆ, ಯುದ್ಧಗಳು ನಡೆಯುವ ಸಂಭವವಿದೆ. ಜಗತ್ತಿನ ಮಹಾ ಶಕ್ತಿಗಳು ಎಐ ತಂತ್ರಜ್ಞಾನದ ಬಲದಿಂದ ಮಹಾಯುದ್ಧವನ್ನೇ ಮಾಡಲಿವೆ. ರಾಜಕೀಯವಾಗಿ ಸಾಕಷ್ಟು ಏಳುಬೀಳುಗಳು ಕಾಣಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನ ವಾತಾವರಣ ಕಂಡುಬರುವುದು.
ತೈವಾನ್ ಮೇಲೆ ಚೈನಾ ಹಿಡಿತ ಸಾಧಿಸಲಿದೆ. ರಷ್ಯಾ ಮತ್ತು ಅಮೆರಿಕಾ ನಡುವೆ ನೇರ ಯುದ್ಧಗಳು ನಡೆಯಬಹುದು. ಇದರಿಂದ ಜಾಗತಿಕ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದರಿಸಬಹುದು. ಇದರ ಜೊತೆಗೆ ಪ್ರಾಕೃತಿಕ ವಿಕೋಪಗಳೂ ಕಂಡುಬರಬಹುದು ಎಂದು ಭವಿಷ್ಯವಾಣಿ ಹೇಳುತ್ತಿದೆ.