ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಇರುವ ಗೊಂದಲಗಳಿಗೆ ತೆರೆ ಯಾವಾಗ ಎಂಬ ಕುತೂಹಲ ಜನರಲ್ಲಿದೆ. ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೋ, ಇಲ್ಲವೋ ಎಂಬ ಕುತೂಹಲಕ್ಕೆ ತೆರೆ ಎಳೆಯಬೇಕೆಂದರೆ ಈ ಒಬ್ಬರು ವಿದೇಶದಿಂದ ಬರಬೇಕು.
ಹೊಸ ವರ್ಷದಲ್ಲಿ ಸಿಎಂ ಪಟ್ಟ ಸಿಗಬಹುದು ಎಂಬ ಭರವಸೆಯಲ್ಲಿ ಡಿಕೆ ಶಿವಕುಮಾರ್ ಇದ್ದಾರೆ. ಇತ್ತ ಸಿದ್ದರಾಮಯ್ಯ ಬಣ ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಕೈ ತಪ್ಪದಂತೆ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.
ಆದರೆ ಕರ್ನಾಟಕದ ಸಿಎಂ ಕುರ್ಚಿ ಕಿತ್ತಾಟಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದು ಕಾರಣ. ಇಬ್ಬರೂ ವಾಪಸಾಗುವುದನ್ನೇ ರಾಜ್ಯ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ.
ಇದರ ನಡುವೆ ರಾಜ್ಯದ ನಾಯಕತ್ವ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಸೋನಿಯಾ ಗಾಂಧಿ. ಹೀಗಾಗಿ ಅವರೊಬ್ಬರು ವಿದೇಶದಿಂದ ಬರುವುದನ್ನೇ ಈಗ ರಾಜ್ಯ ನಾಯಕರು ಕಾದಿದ್ದಾರೆ. ಅವರು ರಾಜ್ಯದ ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ.