ಬೆಂಗಳೂರು: ಹೊಸ ವರ್ಷದಲ್ಲಾದರೂ ತಮ್ಮ ಸಿಎಂ ಕುರ್ಚಿ ಕನಸು ನನಸಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್ ಗೆ ಹೊಸ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಆಗುತ್ತದೆಂದು ಕಾದು ಕುಳಿತಿದ್ದ ಡಿಕೆ ಶಿವಕುಮಾರ್ ಬಣಕ್ಕೆ ಹೈಕಮಾಂಡ್ ನಿರಾಸೆ ಮಾಡಿತ್ತು. ಕಳೆದ ವರ್ಷ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಹೈಕಮಾಂಡ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿತ್ತು.
ಯಾಕೆಂದರೆ ಸಿದ್ದರಾಮಯ್ಯನವರಿಂದಲೂ ಅಧಿಕಾರ ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ. ಇದು ಸರ್ಕಾರದ ಮೇಲೆ ಪರಿಣಾಮ ಬೀರಬಹುದು ಎಂದು ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆದರೆ ಈಗ ಹೊಸ ವರ್ಷದಲ್ಲಿ ತಮ್ಮ ಪರವಾಗಿ ಹೈಕಮಾಂಡ್ ನಿರ್ಧಾರ ಮಾಡಬಹುದು ಎಂದು ಕಾದು ಕುಳಿತಿರುವ ಡಿಕೆ ಶಿವಕುಮಾರ್ ಗೆ ಈಗ ಗೃಹಸಚಿವ, ದಲಿತ ನಾಯಕ ಪರಮೇಶ್ವರ್ ರೂಪದಲ್ಲಿ ಹೊಸ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ದಲಿತ ನಾಯಕರಾಗಿರುವ ಪರಮೇಶ್ವರ್ ಗೆ ಸಿಎಂ ಸ್ಥಾನ ಕೊಡಬೇಕು ಎಂದು ದಾಳ ಉರುಳಿಸಲು ಸಿದ್ದು ಬಣ ಮುಂದಾಗಿದೆ. ಇತ್ತ ಪರಮೇಶ್ವರ್ ಕೂಡಾ ನನಗೂ ಪದೋನ್ನತಿಯ ಆಕಾಂಕ್ಷೆ ಇದೆ ಎಂದಿದ್ದಾರೆ. ಹೀಗಾಗಿ ಈಗ ಡಿಕೆಶಿಗೆ ಈಗ ಹೊಸ ತಲೆನೋವು ಎದುರಾಗಿದೆ.