Publish Date: Thu, 22 Jan 2026 (10:04 IST)
Updated Date: Thu, 22 Jan 2026 (10:07 IST)
ದಕ್ಷಿಣ ಕನ್ನಡ: ಪುತ್ತೂರು ಶಾಸಕ ಅಶೋಕ್ ರೈ ಸರ್ಕಾರೀ ಜಾಗದಲ್ಲಿರುವ ಮಾವಿನ ಮಿಡಿ ಕೊಯ್ಯಬೇಡಿ ಎಂದು ಆರ್ಡರ್ ಮಾಡಿದ್ದಾರೆ. ಇದಕ್ಕೆ ಕಾರಣವೇನು ನೋಡಿ.
ದಕ್ಷಿಣ ಕನ್ನಡ ಭಾಗದಲ್ಲಿ ಜನವರಿ ಕಳೆದರೆ ಮಾವಿನ ಮಿಡಿ ಕೊಯ್ಯುವ ಸಂಭ್ರಮ. ಮಾವಿನ ಮಿಡಿ ಉಪ್ಪಿನಕಾಯಿ ಈ ಭಾಗದಲ್ಲಿ ಫೇಮಸ್. ಹೀಗಾಗಿ ಜನ ಎಲ್ಲೆಂದರಲ್ಲಿಂದ ಮಾವಿನ ಮಿಡಿ ಸಂಗ್ರಹಿಸಿ ಉಪ್ಪಿನಕಾಯಿ ಹಾಕುತ್ತಾರೆ.
ಅದರಲ್ಲೂ ಕೆಲವು ಸರ್ಕಾರೀ ಜಾಗದಲ್ಲಿರುವ ಮರಗಳಿಂದ ಮಿಡಿ ಕೊಯ್ದು ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಕೆಲವರಿಗೆ ಈ ಸಮಯದಲ್ಲಿ ಇದು ವ್ಯಾಪಾರವೇ ಆಗಿರುತ್ತದೆ. ಆದರೆ ಅಂತಹವರಿಗೆ ಶಾಸಕ ಅಶೋಕ್ ಕುಮಾರ್ ರೈ ಶಾಕ್ ಕೊಟ್ಟಿದ್ದಾರೆ.
ಸರ್ಕಾರೀ ಜಾಗದಲ್ಲಿರುವ ಮಾವಿನ ಮಿಡಿಯನ್ನು ಯಾರೂ ಕೊಯ್ಯಬಾರದು. ಈ ಬಾರಿ ಸಾಕಷ್ಟು ಮರಗಳು ಹೂ ಬಿಟ್ಟಿವೆ. ಆದರೆ ಯಾರೂ ಕೊಯ್ಯಲು ಅವಕಾಶವಿಲ್ಲ. ಇದು ಹಣ್ಣಾಗಿ ಪಕ್ಷಿ, ಪ್ರಾಣಿಗಳಿಗೆ ಆಹಾರವಾಗಬೇಕು. ಅರಣ್ಯದ ರಕ್ಷಣೆ ನಮ್ಮ ಜವಾಬ್ಧಾರಿ. ನಮ್ಮ ಉಸಿರಿಗೆ ಜೀವ ಕೊಡುವ ಮರಗಳನ್ನು ಕಾಪಾಡಿಕೊಳ್ಳಬೇಕು. ಪರಿಸರ ಕೊಟ್ಟ ಹಣ್ಣಿನಿಂದ ಪ್ರಾಣಿ ಪಕ್ಷಿಗಳು ಬದುಕುವಂತಾಗಬೇಕು ಎಂದಿದ್ದಾರೆ. ಅವರ ಹೇಳಿಕೆಗೆ ಪರಿಸರ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.