Daily Horoscope

Select Your Language

Notifications

webdunia
webdunia
webdunia
webdunia

ಧಮ್ಕಿ ಹಾಕಿದ ರಾಜೀವ್ ಗೌಡಗೆ ತಕ್ಕ ಪಾಠ ಕಲಿಸಲು ರೆಡಿಯಾದ ಕೆಪಿಸಿಸಿ

Rajiv gowda
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ ತಕ್ಕ ಪಾಠ ಕಲಿಸಲು ಕೆಪಿಸಿಸಿ ಮುಂದಾಗಿದೆ.

ರಾಜೀವ್ ಗೌಡ ಮೇಲೆ ಕೇಸ್ ದಾಖಲಾಗಿದ್ದರೂ ಇದುವರೆಗೆ ಅವರನ್ನು ಬಂಧಿಸಲಾಗಿಲ್ಲ. ಈ ಸಂಬಂಧ ಕೋರ್ಟ್ ಈಗಾಗಲೇ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇದರ ನಡುವೆ ವಿಪಕ್ಷಗಳೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಇದರ ನಡುವೆ ಕೆಪಿಸಿಸಿ ಶಿಸ್ತು ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ಆರೋಪಿ ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಾರಣ ಕೇಳಿ ಕೆಪಿಸಿಸಿ ನೋಟಿಸ್ ಜಾರಿ ಮಾಡಿತ್ತು.

ಆದರೆ ನೋಟಿಸ್ ಜಾರಿ ಮಾಡಿ ಇಷ್ಟು ದಿನವಾದರೂ ರಾಜೀವ್ ಗೌಡ ಉತ್ತರ ನೀಡಿಲ್ಲ. ನೋಟಿಸ್ ಗೆ ಉತ್ತರಿಸಲು ಒಂದು ವಾರದ ಗಡುವು ನೀಡಲಾಗಿತ್ತು. ಆದರೂ ಉತ್ತರ ನೀಡಿಲ್ಲ. ಹೀಗಾಗಿ  ಪಕ್ಷದಿಂದಲೇ ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿ ಪರ್ಯಾಯ ಉತ್ಸವ ಹಿಂದೂಗಳದ್ದಲ್ವಾ, ಭಗವಧ್ವಜ ಹಾರಿಸಿದ್ರೆ ತಪ್ಪೇನು ಎಂದ ಪಬ್ಲಿಕ್