ಬೆಂಗಳೂರು: ಕೇಂದ್ರದ ವಿಬಿ ಜಿ ರಾಮ್ ಜಿ ಬಿಲ್ ವಿರೋಧಿಸಿ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಲು ರಾಜ್ಯಪಾಲ ಥ್ಯಾವರ್ ಚಂದ್ರ ಗೆಹ್ಲೋಟ್ ನಿರಾಕರಿಸಿದ್ದಾರೆ. ಒಂದು ವೇಳೆ ಅವರು ಇಂದು ಸದನಕ್ಕೆ ಬಾರದೇ ಇದ್ದರೆ ಏನಾಗುತ್ತದೆ?
ರಾಜ್ಯಪಾಲರಿಗೆ ಇಂದು ಮಾಡಬೇಕಿರುವ ಭಾಷಣವನ್ನು ನಿನ್ನೆಯೇ ಕಳುಹಿಸಿಕೊಡಲಾಗಿತ್ತು. ಈ ಭಾಷಣದಲ್ಲಿ ಜಿ ರಾಮ್ ಜಿ ಬಿಲ್ ಬಗ್ಗೆ ಟೀಕೆ ಮಾಡಲಾಗಿದೆ. ಭಾಷಣದಲ್ಲಿರುವ ಕೆಲವು ಅಂಶಗಳನ್ನು ತಿದ್ದುಪಡಿ ಮಾಡದೇ ಭಾಷಣ ಮಾಡಲ್ಲ ಎಂದು ರಾಜ್ಯಪಾಲರು ಸೂಚನೆ ನೀಡಿದ್ದರು.
ಇದರಿಂದ ಈಗ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಭೀತಿ ಎದುರಾಗಿದೆ. ಒಂದು ವೇಳೆ ರಾಜ್ಯಪಾಲರು ಸದನಕ್ಕೆ ಬಾರದೇ ಹೋದಲ್ಲಿ ಸದನ ನಡೆಯದೇ ಹೋಗಬಹುದು. ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡುವುದು ಅವರ ಕರ್ತವ್ಯಗಳಲ್ಲಿ ಒಂದು. ಹೀಗಾಗಿ ಅವರು ಸದನಕ್ಕೆ ಬಾರದೇ ಇದ್ದರೆ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಬಹುದು. ಇದರೊಂದಿಗೆ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಹೆಚ್ಚಾಗಬಹುದು. ಸಚಿವ ಸಂಪುಟ ಕರೆದು ರಾಜ್ಯಪಾಲರ ವಿರುದ್ಧ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಜೊತೆಗೆ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಬಹುದು. ಹೀಗಾಗಿ ಇಂದು ಏನಾಗಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.