Select Your Language

Notifications

webdunia
webdunia
webdunia
webdunia

ಔತಣಕೂಟದ ಹಣ ಸಿಎಂ ಪರಿಹಾರ ನಿಧಿಗೆ ನೀಡಿದ ಸಚಿವ…!

ಪುಟ್ಟರಾಜು
ಮಂಡ್ಯ , ಬುಧವಾರ, 22 ಆಗಸ್ಟ್ 2018 (16:09 IST)
ಕೊಡಗಿನ ಸಂತ್ರಸ್ತರಿಗೆ ನೆರವಿಗೆ ಮಗನ ಬೀಗರ ಔತಣಕೂಟವನ್ನು ರದ್ದು ಮಾಡಿ, ಆ ಹಣವನ್ನು ಮಡಿಕೇರಿ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ ಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನಿರ್ಧರಿಸಿದ್ದಾರೆ. 

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ರ ಶಿವರಾಜು ಅವ್ರ ಬೀಗರ ಔತಣಕೂಟ ರದ್ದು ಮಾಡಿ ಕೊಡಗಿನ ಸಂತ್ರಸ್ತರಿಗೆ ನೆರವಾಗಲು ನಿರ್ಧರಿಸಿದ್ದು, ಕೊಡಗಿನ ಸಂತ್ರಸ್ತರ ನೆರವಿಗೆ ಪುಟ್ಟರಾಜು ಅವರಿಂದ 10 ಲಕ್ಷ ರೂ.ದೇಣಿಗೆ ಕೊಡಲಾಗುವುದು. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಅರ್ಪಿಸುತ್ತೇವೆ ಎಂದ್ರು. ಕೆಲವು ದಿನಗಳ ಹಿಂದೆ ಪುಟ್ಟರಾಜು ಪುತ್ರ ಶಿವರಾಜು ಅವ್ರ ವಿವಾಹ ನಡೆದಿತ್ತು.

ಭಾನುವಾರ ನಿಗದಿಯಾಗಿದ್ದ ಬೀಗರ ಔತಣ ರದ್ದು ಮಾಡಿದ ಸಿ.ಎಸ್. ಪುಟ್ಟರಾಜು, ಇದೀಗ ಬೀಗರ ಔತಣ ಕೂಟದ ಹಣವನ್ನು ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ. ಕೊಡಗಿನ ಜನತೆ ಸಂಕಷ್ಟದಲ್ಲಿರುವಾಗ ನಾವು ಸಂಭ್ರಮದ ಆಚರಣೆ ಮಾಡುವುದು ಸರಿಯಲ್ಲ‌ ಎಂದು ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ. 

 




Share this Story:

Follow Webdunia kannada

ಮುಂದಿನ ಸುದ್ದಿ

ಮೊಮೊ ಸೂಸೈಡ್ ಗೇಮ್ ಗೆ ಭಾರತದಲ್ಲಿ ಮೊದಲ ಬಲಿ