Select Your Language

Notifications

webdunia
webdunia
webdunia
webdunia

ಜು. 20ರಂದು ಕೆ.ಆರ್.ಎಸ್. ಬಾಗಿನ ಅರ್ಪಿಸಲಿರುವ ಸಿಎಂ

ಜು. 20ರಂದು ಕೆ.ಆರ್.ಎಸ್. ಬಾಗಿನ ಅರ್ಪಿಸಲಿರುವ ಸಿಎಂ
ಮಂಡ್ಯ , ಸೋಮವಾರ, 16 ಜುಲೈ 2018 (17:37 IST)
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆ.ಆರ್.ಎಸ್ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಜು. 20 ರಂದು ಕೆ.ಆರ್.ಎಸ್. ಅಣೆಕಟ್ಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಗಿನ ಅರ್ಪಿಸಲಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 19ರಂದು ಮಡಿಕೇರಿಗೆ ಆಗಮಿಸಿ, ಮಳೆಯಿಂದ ಸಮಸ್ಯೆ ಉಂಟಾಗಿರುವ ಪ್ರದೇಶಗಳ ಬಗ್ಗೆ ಅವಲೋಕನ ನಡೆಸುವರು. ಆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕಾರಿಗಳ ಸಭೆ ನಡೆಸಲಿದ್ದಾರೆ. 20ರಂದು ತಲಕಾವೇರಿಗೆ ಪೂಜೆ ಸಲ್ಲಿಸಿ, ನಂತರ ಚಾಮುಂಡಿ ಬೆಟ್ಟಕ್ಕೆ ಪೂಜೆ ಸಲ್ಲಿಸುವರು. ಕಬಿನಿ ಹಾಗೂ ಕೆ.ಆರ್.ಎಸ್. ಗೆ ಬಾಗಿನ ಅರ್ಪಿಸುವರು ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿಗೆ ಜಗದೀಶ್ ಶೆಟ್ಟರ್ ತಿರುಗೇಟು