Select Your Language

Notifications

webdunia
webdunia
webdunia
webdunia

ಪೌರ ಕಾರ್ಮಿಕರು ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಾರೆಂದ ಅಧ್ಯಕ್ಷ

ಪೌರ ಕಾರ್ಮಿಕರು ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಾರೆಂದ ಅಧ್ಯಕ್ಷ
ಹುಬ್ಬಳ್ಳಿ , ಸೋಮವಾರ, 16 ಜುಲೈ 2018 (16:41 IST)
ಆ ಮಹಾನಗರ ಪಾಲಿಕೆಯಲ್ಲಿ ನಕಲಿ ಪೌರ ಕಾರ್ಮಿಕರು ತುಂಬಿದ್ದಾರೆಂದು ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಆರೋಪಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಕಲಿ  ಪೌರ ಕಾರ್ಮಿಕರು ತುಂಬಿದ್ದಾರೆಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದ್ದಾರೆ. ಪಾಲಿಕೆ ಗುತ್ತಿಗೆದಾರರು ತಮ್ಮ ಸಂಬಂಧಿಗಳನ್ನು ಪಾಲಿಕೆಯಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ. ನೇರ ವೇತನ ಆದೇಶ  ಬಂದನಂತರ ನಕಲಿ ಕಾರ್ಮಿಕರು ವಾರ್ಡಗಳಿಗೆ ಬಂದು ಬಯೋ ಮೆಟ್ರಿಕ್ ಹಾಜರಾತಿ ಹಾಕುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಸೇವೆಗೆ ಬರದ ಇವರು,  ಇತ್ತೀಚೆಗಷ್ಟೇ ಕೆಲಸಕ್ಕೆ ಬರುತ್ತಿದ್ದಾರೆ. ಅಕ್ರಮವನ್ನ  ವಿರೋಧ ಮಾಡಿದ ಪೌರ ಕಾರ್ಮಿಕರ ಮೇಲೆ ಹಲ್ಲೆ ಯತ್ನ ನಡೆದಿವೆ ಎಂದು ಹೇಳಿದರು.

ನಕಲಿ ಪೌರ ಕಾರ್ಮಿಕರು ಮಾರಕಾಸ್ತ್ರಗಳನ್ನ ಹಿಡಿದು ಓಡಾಡುತ್ತಿದ್ದಾರೆ. ಇದರಿಂದ ನಿಜವಾದ ಪೌರಕಾರ್ಮಿಕರು ಅಭದ್ರತೆಯಿಂದ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪಾಲಿಕೆ ಅಧಿಕಾರಿಗಳು ಸಹ ನಕಲಿ ಪೌರ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂದು ವಿಜಯ ಗುಂಟ್ರಾಳ ಆರೋಪಿಸಿದರು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಾಮನ್ಯ ಸಭೆಯಲ್ಲಿ ಹಾಗೂ ಸರ್ಕಾರದಿಂದ ಹೊರಡಿಸಿದ ಆದೇಶಕ್ಕೂ ಪಾಲಿಕೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂದು ಪಲಿಕೆ ಆಯುಕ್ತರ ಮೇಲೆ ಗಂಭೀರ ಆರೋಪ ಆರೋಪ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರ ನಿಯಂತ್ರಕ ಪೊಲೀಸರಿಗೆ ಒಪ್ಪಿಸಿದ್ದಾದರೂ ಏನು ಗೊತ್ತಾ?