Select Your Language

Notifications

webdunia
webdunia
webdunia
webdunia

ಸಂಚಾರ ನಿಯಂತ್ರಕ ಪೊಲೀಸರಿಗೆ ಒಪ್ಪಿಸಿದ್ದಾದರೂ ಏನು ಗೊತ್ತಾ?

ಸಂಚಾರ ನಿಯಂತ್ರಕ ಪೊಲೀಸರಿಗೆ ಒಪ್ಪಿಸಿದ್ದಾದರೂ ಏನು ಗೊತ್ತಾ?
ಚಿಕ್ಕಮಗಳೂರು , ಸೋಮವಾರ, 16 ಜುಲೈ 2018 (16:21 IST)
ರಸ್ತೆಯಲ್ಲಿ ನೋಟ್ ಸಿಕ್ಕರೆ ಹಿಂದೆ ಮುಂದೆ ನೋಡದೇ ಎತ್ತಿಟ್ಟುಕೊಳ್ಳುವವರೇ ಬಹಳ ಜನ. ಇನ್ನು ಬಂಗಾರ ಸಿಕ್ಕರೆ?... ಅಯ್ಯೋ ಯಾರಾದರೂ ಸಿಕ್ಕ ಚಿನ್ನವನ್ನು ಕೊಡುತ್ತಾರಾ? ಎಂದು ಹಲವರು ಹುಬ್ಬೇರಿಸಬಹುದು. ಆದರೆ ಆ ಸಂಚಾರ ನಿಯಂತ್ರಕ  ಮಾಡಿದ್ದೇ ಬೇರೆ.

ಮಾನವೀಯತೆ ಮೆರೆದ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಿಯಂತ್ರಕ ಈಗ ಗಮನ ಸೆಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ಸಿಕ್ಕ ಬಂಗಾರದ ತಾಳಿ ಸರವನ್ನು ಪೊಲೀಸರಿಗೆ ಒಪ್ಪಿಸಿ ಮಾದರಿಯಾಗಿದ್ದಾರೆ ಆ
ಸಂಚಾರ ನಿಯಂತ್ರಕ. ಪ್ರಯಾಣಿಕರಿಗೆ ಸಂಬಂಧಿಸಿದ ತಾಳಿ ಸರ ಚಿಕ್ಕಮಗಳೂರು ಜಿಲ್ಲೆಕೊಟ್ಟಿಗೆಹಾರಬಸ್ ನಿಲ್ದಾಣದಲ್ಲಿ ಸಿಕ್ಕಿತ್ತು. ಬಂಗಾರದ ತಾಳಿ ಸರವನ್ನು‌‌ ಬಣಕಲ್ ಪೊಲೀಸರಿಗೆ  ಸಂಚಾರ ನಿಯಂತ್ರಕ ಒಪ್ಪಿಸಿದ್ದಾರೆ.
ಮಾನವೀಯತೆ ಮೆರೆದ ಕೊಟ್ಟಿಗೆಹಾರ ಬಸ್ ನಿಲ್ದಾಣದ ಸಂಚಾರ ನಿಯಂತ್ರಕನಾಗರಾಜ್ ಶೆಟ್ಟಿಯವರಾಗಿದ್ದಾರೆ.

ನಾಗರಾಜ್ ಶೆಟ್ಟಿ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಸುಮಾರು‌10 ಸಾವಿರಕ್ಕೂ ಹೆಚ್ಚು ಮೌಲ್ಯದಮಾಂಗಲ್ಯ ಸರ ಅದಾಗಿದೆ. ಸರ ಕಳೆದುಕೊಂಡವರು ಬಣಕಲ್ಠಾಣೆಗೆ ಹೋಗಿವಾಪಸ್ ಪಡೆಯುವಂತೆ   ನಾಗರಾಜ್ ಶೆಟ್ಟಿ‌  ಮನವಿ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್