Select Your Language

Notifications

webdunia
webdunia
webdunia
webdunia

ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?

ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?
ಹುಬ್ಬಳ್ಳಿ , ಸೋಮವಾರ, 16 ಜುಲೈ 2018 (15:34 IST)
ಆತ ತನ್ನ ಪತ್ನಿಯೇ ಸರ್ವಸ್ವ ಎಂದು ಜೀವನ ನಡೆಸುತ್ತಿದ್ದನು. ಕುಟುಂಬದ ಕಣ್ಣಾಗಿರಬೇಕಾಗಿದ್ದ ಪತ್ನಿಯ ಕಣ್ಣು ಮಾತ್ರ ಬೇರೆಬ್ಬರ ಮೇಲಿತ್ತು. ಹೀಗಾಗಿ ತನ್ನಪ್ರಿಯಕರನೊಂದಿಗೆ ಸೇರಿದ ಆಕೆ ತನ್ನ ಪತಿಗೆ ಮಾಡಿದ್ದನ್ನು ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ…!

ಅನೈತಿಕ ಸಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರೀಯಕರನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಬಲ್ಡೋಜರ ನಿವಾಸಿ, ಮಹ್ಮದ ರಫೀಕ್ (40)  ಆಯಟ್ಟಿಯನ್ನು ಜೂನ್ 11 ರಂದು ಪತ್ನಿ ಶಬಾನಾ ಆಯಟ್ಟಿ ಹಾಗೂ ಪ್ರಿಯಕರ ಬಾಷಾಸಾಬ್ ಧಾರವಾಡ ಇಬ್ಬರು ಸೇರಿ, ಹುಬ್ಬಳ್ಳಿ ಮಾರಡಗಿ ರಸ್ತೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಕಳೆದ 10 ವರ್ಷದ ಹಿಂದೆ ಮಹ್ಮದ ರಫೀಕ್ ಮತ್ತು  ಶಬಾನಾ ಇಬ್ಬರು ಮದುವೆ ಆಗಿದ್ದರು. ಆದ್ರೆ ಪತ್ನಿ ಶಬಾನಾ ಭಾಷಾಸಾಬ್  ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ವಿಷಯ ಪತಿಗೆ ಗೊತ್ತಾಗಿದ್ದು, ಇದನ್ನು ಪ್ರಶ್ನೆ ಮಾಡಿದ ಪತಿಯನ್ನು ಪತ್ನಿ ಮತ್ತು ಪ್ರಿಯಕರ ಮತ್ತು  ಶಬನಾ ಕೊಡಲಿಯಿಂದ ಕೊಚ್ವಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಮೊದಲು  ಹುಬ್ಬಳ್ಳಿಯ ನವನಗರ  ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ  ಹೆಂಡತಿಯನ್ನು ಪೊಲೀಸ್ ಠಾಣೆಗೆಕರೆಯಿಸಿ ವಿಚಾರಣೆ ಮಾಡಿದಾಗ, ಹೆಂಡತಿ ಸತ್ಯ ಬಾಯಿ ಬಿಟ್ಟಿದ್ದಾಳೆ. ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ?