Publish Date: Thu, 12 Jul 2018 (16:48 IST)
Updated Date: Thu, 12 Jul 2018 (16:56 IST)
ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ ಮಾಡುತ್ತಿದ್ದಾರೆ.
3 ವರ್ಷದಲ್ಲಿ ಉದ್ಯಾನ ವನ ನಿರ್ವಹಣೆಗೆ 12 ಕೋಟಿ 70 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದಾರೆ. 1 ಕೋಟಿ 40 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣಗಳ ಖರೀದಿ ಮಾಡಿದ್ದಾರೆ. ಇನ್ನು 2018ರ ಫೆಬ್ರವರಿ ಒಂದು ತಿಂಗಳಲ್ಲಿ ಕೆಲಸಗಾರರ ವೇತನಕ್ಕಾಗಿ 72 ಲಕ್ಷ ರುಪಾಯಿ ವೆಚ್ಚ ಮಾಡಲಾಗಿದೆ.ಮೂರು ವರ್ಷಗಳಲ್ಲಿ ಅಂದಾಜು ಉದ್ಯಾನ ವನಕ್ಕಾಗಿ 20 ಕೋಟಿ ಅಧಿಕ ಹಣ ವೆಚ್ಚ ಮಾಡಿದ್ದಾರೆ.
ಸರ್ಕಾರದ ಅನೇಕ ಯೋಜನೆಗಳಿಗೆ ಹಣದ ಕೊರತೆ ಇದ್ದು ಹೀಗಿರುವಾಗ ರಾಷ್ಟ್ರಪತಿಗಳ ಉದ್ಯಾನ ವನಕ್ಕೆ ಕೋಟ್ಯಾಂತರ ರುಪಾಯಿ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಭೀಮಪ್ಪ ಗಡಾದ ಆರೋಪ ಮಾಡುತ್ತಿದ್ದಾರೆ.