Select Your Language

Notifications

webdunia
webdunia
webdunia
webdunia

4 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ

4 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ
ಹಾಸನ , ಗುರುವಾರ, 12 ಜುಲೈ 2018 (15:54 IST)
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ ಜೀವನದಿ ಹೇಮಾವತಿ, ಭರ್ತಿ ಹಂತ ತಲುಪಿದೆ. ಬರೋಬ್ಬರಿ 4 ವರ್ಷಗಳ ನಂತರ ಜಲಾಶಯದ ಒಡಲು ತುಂಬಿಕೊಳ್ಳುತ್ತಿರುವುದು ಹೇಮೆಯನ್ನೇ ನಂಬಿರುವ ಅನ್ನದಾತರು ಹಾಗೂ ಲಕ್ಷಾಂತರ ಜನರಲ್ಲಿ ಅಪಾರ ಖುಷಿ ತರಿಸಿದೆ.

2922 ಅಡಿ ಗರಿಷ್ಠಮಟ್ಟದ ಜಲಾಶಯದಲ್ಲಿ ಇಂದು 2913 ಅಡಿ ನೀರಿದ್ದು, ವರ್ಷಧಾರೆ ಹೀಗೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಹೇಮೆ ಒಡಲು ತುಂಬಿಕೊಳ್ಳಲಿದ್ದಾಳೆ.  ಡ್ಯಾಂ ಭರ್ತಿಗೆ ಕೇವಲ 9 ಅಡಿ ನೀರು ಬರಬೇಕಿದೆ.  

ಯಾವುದೇ ಕ್ಷಣದಲ್ಲೂ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಬಿಡುವ ಸಾಧ್ಯತೆಯಿದ್ದು, ನದಿಪಾತ್ರದ ಜನರಿಗೆ ಹೇಮಾವತಿ ಜಲಾಶಯದ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಮಲೆನಾಡು ಭಾಗದಲ್ಲಿ ಜೋರು ಮಳೆ ಮುಂದುವರಿದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್