Publish Date: Thu, 12 Jul 2018 (15:24 IST)
Updated Date: Thu, 12 Jul 2018 (15:27 IST)
ತೊಟ್ಟಲಿಗೆ ಕಟ್ಟಿದ್ದ ಸೀರೆಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಬಂಧಿಕರ ಮನೆಗೆ ಬಂದಾಗ ಘಟನೆ ಜರುಗಿದೆ. ಮಗುವಿನ ತೊಟ್ಟಿಲು ತೂಗುವಾಗ ನಡೆದ ಅವಘಡ ಇದಾಗಿದೆ ಎನ್ನಲಾಗಿದೆ.
ತೊಟ್ಟಿಲಿಗೆ ಕಟ್ಟಿದ್ದ ಸೀರೆ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಬಾಲಕನ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಚಿಕ್ಕಮಗಳೂರಿನ ಆದಿಶಕ್ತಿ ನಗರದಲ್ಲಿ ಘಟನೆ ತೇಜಸ್ (10) ಮೃತ ಬಾಲಕನಾಗಿದ್ದಾನೆ.
ತೇಜಸ್ ಮೂಲತಃ ಚಿತ್ರದುರ್ಗದ ಬಾಲಕ. ಬಾಲಕನ ತಂದೆ ಚಿತ್ರದುರ್ಗದಲ್ಲಿ ಕೆಎಸ್ಆರ್ಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Jagadeesh
Publish Date: Thu, 12 Jul 2018 (15:24 IST)
Updated Date: Thu, 12 Jul 2018 (15:27 IST)