Select Your Language

Notifications

webdunia
webdunia
webdunia
Saturday, 12 April 2025
webdunia

ತ್ರಿಬಲ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

Firing
ಕಲಬುರಗಿ , ಗುರುವಾರ, 12 ಜುಲೈ 2018 (15:28 IST)
ಪೊಲೀಸರಿಂದ ಹಂತಕನ ಮೇಲೆ ಫೈರಿಂಗ್  ನಡೆದಿದೆ.  ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿ ಮೊಹ್ಮದ್ ಮುಸ್ತಾಫಾ ಆಗಿದ್ದಾನೆ. ಜುಲೈ ನಾಲ್ಕರಂದು ತನ್ನ ಪತ್ನಿಯ ಅಣ್ಣನಾದ ಮಹ್ಮದ್ ಅಕ್ಬರ ಮನೆಗೆ ಆರೋಪಿ ಬೆಂಕಿ ಹಚ್ಚಿದ್ದನು. ಆ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ ಮೊಹ್ಮದ್ ಮುಸ್ತಾಫಾ ಎಸ್ಕೇಪ್ ಆಗಿದ್ದ. ಸಂಬಂಧಿಕರನ್ನೇ ಕೊಲೆ ಮಾಡಿ ಮುಸ್ತಾಫಾ  ತಲೆ ಮರೆಸಿಕೊಂಡಿದ್ದ. ನಗರದ ಜಿಲಾನಾಬಾದ ಬಡಾವಣೆಯಲ್ಲಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದನು.

ಬಂಧನಕ್ಕೆ ಮುಂದಾದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಗೆ ಯತ್ನ ನಡೆಸಿದ್ದ.  ಆತ್ಮರಕ್ಷಣೆಗಾಗಿ ಆರೋಪಯತ್ತ ಗುಂಡು ಹಾರಿಸಿದ ಪೊಲೀಸರು. ಮೂವರು ಪೊಲೀಸ್ ಸಿಬ್ಬಂದಿಗೂ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿಗೆ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೊಟ್ಟಿಲಿಗೆ ಕಟ್ಟಿದ ಸೀರೆ ಆ ಮಗುವಿನ ಸಾವಿಗೆ ಕಾರಣವಾಯ್ತು ಹೇಗೆ ಗೊತ್ತಾ?