Publish Date: Thu, 12 Jul 2018 (16:20 IST)
Updated Date: Thu, 12 Jul 2018 (16:29 IST)
ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆ ಮಹಿಳಾ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ ಸಾರಾಯಿ ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗದಗನಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಸ್ವಗ್ರಾಮದ ಮಲ್ಲಪ್ಪ ಬಾರಕೇರ, ರಾಮಣ್ಣ ಡೊಳ್ಳಿನ ಎಂಬುವರು ಹಲವಾರು ದಿನಗಳಿಂದ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದರು. ಗ್ರಾಮದಲ್ಲಿ ಸರಾಯಿ ನಿಷೇದ ಮಾಡಿದ್ದರೂ ಸಹ ಇವರು ಸಾರಾಯಿ ಮಾರಾಟ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಮಹಿಳೆಯರು ಹಲವಾರು ಬಾರಿ ಮನವಿ ಮಾಡಿದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸ್ಪಂದಿಸಿದ್ದಿಲ್ಲಾ. ಈ ಹಿನ್ನೆಲೆ ಆಕ್ರೊಶಗೊಂಡ ಗ್ರಾಮದ ಮಹಿಳೆಯರು ಸೇರಿದಂತೆ ಮಹಿಳಾ ಸಂಘಟನೆಯವರು ಇಂದು ಮನೆ ಮನೆಗೆ ಹೋಗಿ ಸಾರಾಯಿ ಜಪ್ತಿಮಾಡಿ ಪೊಲೀಸ್ ರಿಗೆ ಒಪ್ಪಿಸಿದ್ದಾರೆ, ಲಕ್ಷೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.