Publish Date: Fri, 08 Jun 2018 (14:40 IST)
Updated Date: Fri, 08 Jun 2018 (14:49 IST)
ಮುಂಬೈ : ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಮೈದುನ ಉದಯ್ ಚೋಪ್ರಾ ಅವರು ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
2013 ರಲ್ಲಿ ಧೂಮ್-3ನಲ್ಲಿ ನಟಿಸಿದ ನಟ ಉದಯ್ ಚೋಪ್ರಾ ಅವರು ಆಮೇಲೆ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಅವರು ಅನೇಕ ದಿನಗಳಿಂದ ಕೆಲಸವಿಲ್ಲದೆ ಖಾಲಿಯಿದ್ದಾರಂತೆ.
ಆದರೆ ಇದೀಗ ಅವರು ಲಾಸ್ ಎಂಜಲೀಸ್ ನ ಹಾಲಿವುಡ್ ಹಿಲ್ಸ್ ನ ಮನೆಯನ್ನು ಮಾರಾಟ ಮಾಡಿದ್ದಾರೆ. ಈ ಮನೆಯನ್ನು ಅವರು ಎರಡು ವರ್ಷಗಳ ಹಿಂದೆ 3,025 ಮಿಲಿಯನ್ ಡಾಲರ್ ಗೆ ಖರೀದಿ ಮಾಡಿದ್ದರು. ಈಗ ಇದನ್ನು 3,799 ಮಿಲಿಯನ್ ಡಾಲರ್ (ಸುಮಾರು 25.3 ಕೋಟಿ)ಗೆ ಮಾರಾಟ ಮಾಡಿದ್ದಾರೆ. ವಿಲ್ಲಾವನ್ನು ಯಾವ ಕಾರಣಕ್ಕೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ