Select Your Language

Notifications

webdunia
webdunia
webdunia
webdunia

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಶಿಲ್ಪಾ ಗೆ ಜನರು ಟ್ರೋಲ್ ಮಾಡಿದ್ಯಾಕೆ?

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಶಿಲ್ಪಾ ಗೆ ಜನರು ಟ್ರೋಲ್ ಮಾಡಿದ್ಯಾಕೆ?
ಮುಂಬೈ , ಗುರುವಾರ, 7 ಜೂನ್ 2018 (14:36 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ವಿಡಿಯೋವೊಂದನ್ನು  ಇನ್ಸ್ಟ್ರಾಗ್ರಾಂ ನಲ್ಲಿ ಹಂಚಿಕೊಳ್ಳುವುದರ ಮೂಲಕ ಇದೀಗ  ಜನರ ಬಾಯಿಗೆ ಆಹಾರವಾಗಿದ್ದಾರೆ.


ನಟಿ ಶಿಲ್ಪಾ ಶೆಟ್ಟಿ  ಅವರು ತನ್ನ ಸ್ನೇಹಿತರ ಜೊತೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಿಹಿ ತಿಂಡಿ ತಿಂದು ಅಕ್ಷಯ್ ಕುಮಾರ್ ಚಿತ್ರದ ಹಾಡಿಗೆ ಶಿಲ್ಪಾ ಅವರು ಸ್ನೇಹಿತೆಯರ ಜೊತೆ ಕುಣಿದು ಕುಪ್ಪಳಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಅದರ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.


ಆದರೆ ಶಿಲ್ಪಾ ಶೆಟ್ಟಿ ಅವರ ಡಾನ್ಸ್  ನೋಡಿ ಮೆಚ್ಚುವ ಬದಲು ಕೆಲವು ಟ್ರೋಲಿಗರು ಬೈಗುಳದ ಸುರಿಮಳೆಯನ್ನೇ ಹರಿಸಿದ್ದಾರೆ. ‘ನಿಮ್ಮ ತರ ಇಫ್ತಾರ್ ಕೂಟದಲ್ಲಿ ಯಾರೂ ಕುಣಿದಿಲ್ಲ ಶಿಲ್ಪಾ ಜಿ’ ಎಂದು ಹಲವರು ಬೈದರೆ, ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ  ಎಂದು ಕೆಲವರು ಆರೋಪ ಕೂಡ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ಎಲ್ಲ ವಿಚಾರವನ್ನೂ ಧರ್ಮಕ್ಕೆ ಜೋಡಿಸೋದು ಸರಿಯಲ್ಲ ಎಂದು ಶಿಲ್ಪಾ ಅವರ ಬೆಂಬಲಕ್ಕೆ ನಿಂತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ರವರನ್ನು ಪೊಲೀಸರು ವಿಚಾರಣೆ ಮಾಡಿದ್ದು ಯಾವ ಕಾರಣಕ್ಕಾಗಿ?