Select Your Language

Notifications

webdunia
webdunia
webdunia
webdunia

ನಾಲ್ಕೂವರೆ ವರ್ಷಗಳ ನಂತರ ಆರ್‌ಬಿಐ ನ ರೆಪೋ ದರದಲ್ಲಿ ಏರಿಕೆ

ನಾಲ್ಕೂವರೆ ವರ್ಷಗಳ ನಂತರ ಆರ್‌ಬಿಐ ನ ರೆಪೋ ದರದಲ್ಲಿ ಏರಿಕೆ
ಮುಂಬೈ , ಗುರುವಾರ, 7 ಜೂನ್ 2018 (14:13 IST)
ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಏರಿಕೆ ಮಾಡಿರುವುದಾಗಿ ಪ್ರಕಟಿಸಿದೆ.


ಇದರ ಪ್ರಕಾರ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು (ರೆಪೊ) ಶೇ 0.25ರಷ್ಟು (ಶೇ 6.25) ಹೆಚ್ಚಿಸಲಾಗಿದೆ. ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿಯನ್ನೂ (ರಿವರ್ಸ್‌ ರೆಪೊ) ಇದೇ ಪ್ರಮಾಣದಲ್ಲಿ (ಶೇ 6ಕ್ಕೆ) ಹೆಚ್ಚಿಸಲಾಗಿದೆ. ನಾಲ್ಕೂವರೆ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೊ ದರ ಹೆಚ್ಚಳ ಪ್ರಕಟಿಸಿದೆ. ಇದರಿಂದ ಬ್ಯಾಂಕ್ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.


ಕಳೆದ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ನಂತರದಲ್ಲಿ ಭಾರತದಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 66 ಡಾಲರ್‌ನಿಂದ 74 ಡಾಲರ್‌ಗೆ ಏರಿಕೆ ಕಂಡಿದೆ. ಇದು ಹಣ ದುಬ್ಬರದ ಮೇಲೆ ಪರಿಣಾಮ ಬೀರಿರುವ ಕಾರಣ ರೆಪೊ ದರ ಏರಿಕೆ ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ 137ನೇ ಸ್ಥಾನ ಪಡೆದ ಭಾರತ