Publish Date: Wed, 06 Jun 2018 (14:19 IST)
Updated Date: Wed, 06 Jun 2018 (14:21 IST)
ಮುಂಬೈ : ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ತಮ್ಮ ನಟನಾ ಜೀವನಕ್ಕೆ ಕೊಂಚ ವಿರಾಮ ಹೇಳಿ ಇದೀಗ ಮಹತ್ವ ಪೂರ್ಣವಾದ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಹೌದು. ನಟ ಧರ್ಮೇಂದ್ರ ಅವರು ದೇಶಿ ಶೈಲಿಯ ಜೀವನಕ್ಕೆ ಫಿದಾ ಆಗಿ ಬಣ್ಣದ ಲೋಕ ಬಿಟ್ಟು ಇದೀಗ ಕೃಷಿ ಕೆಲಸದಲ್ಲಿ ತೊಡಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕೆಲವು ಫೋಟೋ ಗಳನ್ನು ಅವರು ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಧರ್ಮೇಂದ್ರ ಅವರು ಆಕಳಿಗೆ ಹುಲ್ಲು ತಿನ್ನಿಸುತ್ತಿರುವುದು ಹಾಗೂ ಗದ್ದೆಯಲ್ಲಿ ಕೆಲಸ ಮಾಡ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ.
ಹಾಗೇ ಧರ್ಮೇಂದ್ರ ಅವರು ಕೆಲ ವಿಡಿಯೋಗಳನ್ನು ಕೂಡ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಅದ್ರಲ್ಲಿ ಮಾವಿನ ಹಣ್ಣಿನ ಜೊತೆಗಿರುವ ಧರ್ಮೇಂದ್ರ ಇದು ನಮ್ಮ ತೋಟದಲ್ಲಿ ಬೆಳೆದ ಮಾವು. ತುಂಬಾ ಇಷ್ಟಪಟ್ಟು ಖರೀದಿ ಮಾಡಿದ್ದೆವು. ಈಗ ಇಷ್ಟಪಟ್ಟು ಹಣ್ಣುಗಳನ್ನು ತಿನ್ನುತ್ತಿದ್ದೇವೆ ಎಂದಿದ್ದಾರೆ.
82 ವರ್ಷ ವಯಸ್ಸಿನ ಧರ್ಮೇಂದ್ರ ಅವರು ನಟನೆ ಬಿಟ್ಟಿಲ್ಲ. ಸದ್ಯದಲ್ಲೇ ಯಮಲಾ ಪಗಲಾ ದಿವಾನಾ-2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ