Select Your Language

Notifications

webdunia
webdunia
webdunia
webdunia

ನಿಕ್ ಜೋನಾಸ್ ಇನ್ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಪ್ರಪೋಸ್ ಮಾಡಿದ್ರಾ.....!

ನಿಕ್ ಜೋನಾಸ್ ಇನ್ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಪ್ರಪೋಸ್ ಮಾಡಿದ್ರಾ.....!
ಬೆಂಗಳೂರು , ಶುಕ್ರವಾರ, 8 ಜೂನ್ 2018 (14:32 IST)
ಬಾಲಿವೂಡ್‌ನಲ್ಲಿ ಸುದ್ದಿಗಳಿಗೆ ಏನು ಬರವಿಲ್ಲ ಯಾವುದಾದರೂ ಒಂದು ಹಾಟ್ ನ್ಯೂಸ್ ಚಾಲನೆಯಲ್ಲಿ ಇದ್ದೇ ಇರುತ್ತದೆ ಸದ್ಯಕ್ಕೆ ಬಾಲಿವೂಡ್ ಅಂಗಳದಲ್ಲಿ ಬಿಗ್ ಗಾಸಿಪ್ ಅಂದ್ರೆ ಪಿಗ್ಗಿ. ಹೌದು ಸದ್ಯ ಬಾಲಿವೂಡ್‌ನಲ್ಲಿ ಕೇಳಿಬರುತ್ತಿರೋ ಸುದ್ದಿ ಈಗ ಅಭಿಮಾನಿಗಳಿಗೆ ತುಂಬಾ ಕೂತೂಹಲ ಮೂಡಿಸಿದೆ ಅದ್ಯಾವ ಸುದ್ದಿ ಅಂತೀರಾ ಈ ವರದಿಯನ್ನು ನೋಡಿ.
ಪಿಗ್ಗಿ ಲವ್‌ನಲ್ಲಿ ಬಿದ್ದಿದ್ದಾಳೆ, ಡೇಟ್ ಮಾಡ್ತಾ ಇದ್ದಾಳೆ ಅನ್ನೋ ವದಂತಿಯೊಂದು 2017 ರಲ್ಲಿ 2017 ರ ಮೆಟ್ ಗಾಲಾದಲ್ಲಿ ಪಿಗ್ಗಿ ಮತ್ತು ನಿಕ್ ಜೋನಾಸ್ ಜೊತೆಯಾಗಿ ಕಾಣಿಸಿಕೊಂಡಾಗ ಬಾರಿ ಸುದ್ದಿಯಾಗಿತ್ತು. ಆದರೆ ಇದೀಗ ಅವರಿಬ್ಬರ ನಡುವೆ ಏನೋ ಇದೆ ಎನ್ನುವುದು ಅವರಿಬ್ಬರ ಇನ್‌ಸ್ಟ್ರಾಗ್ರಾಮ್‌ನ ಪ್ಲರ್ಟಿಂಗ್ ನೋಡಿದವರಿಗೆ ಇದು ಸತ್ಯ ಇರಬಹುದೇನೋ ಎಂದು ಅನಿಸಿದೆ.
 
25 ವರ್ಷದ ಪಾಪ್ ಸ್ಟಾರ್, ನಟ ನಿಕ್ ಜೋನಾಸ್ ಮತ್ತು 35 ಪಿಗ್ಗಿ ಎರಡು ವಾರಗಳ ಹಿಂದೆ ಲಾಸ್ ಏಂಜಲೀಸ್‌ನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡು ಈ ವದಂತಿಗಳಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕಳೆದ ವಾರ ಇಬ್ಬರೂ ಡಿನ್ನರ್‌ನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದು ಅಷ್ಟೇ ಅಲ್ಲದೇ ಇನ್‌ಸ್ಟ್ರಾಗ್ರಾಮ್‌ನಲ್ಲೂ ಸಹ ಇವರಿಬ್ಬರ ಫ್ಲರ್ಟಿಂಗ್ ಮುಂದುವರಿದಿದೆ ಇದರ ಕುರಿತು ಅವರಿಬ್ಬರೂ ತಮ್ಮ ಸಂಬಂಧದ ಕುರಿತು ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲವಾದರೂ ಹಲವು ಊಹಾಪೋಹಗಳಿಗೆ ಇದು ಕಾರಣವಾಗಿದೆ. 
webdunia
ಅಷ್ಟೇ ಅಲ್ಲ ಮೂಲಗಳ ಪ್ರಕಾರ ಇವರಿಬ್ಬರೂ ಮೆಮೋರಿಯಲ್ ಡೇ ವಾರಾಂತ್ಯವನ್ನು ತಮ್ಮ ಇತರ ಸ್ನೇಹಿತರ ಜೊತೆಯಲ್ಲಿ ಆಚರಿಸಿಕೊಂಡಿದ್ದು ಅದಕ್ಕೆ ಪೂರಕವಾಗಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ದೋಣಿಯ ಮೇಲೆ ಒಟ್ಟಿಗೆ ಕುಳಿತಿದ್ದ ಈ ಜೋಡಿ ತುಂಬಾ ತುಂಬಾ ಆತ್ಮೀಯತೆಯಲ್ಲಿ ಇರುವಂತೆ ಕಂಡುಬಂದಿರುವುದು ಸುಳ್ಳಲ್ಲ. ಅದಲ್ಲದೇ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ತಮ್ಮ ಸ್ನೇಹಿತೆಯರೊಂದಿಗೆ ತಿಂಡಿಯನ್ನು ತಿನ್ನುತ್ತಿರುವ ಫೋಟೋಗೆ ನಿಕ್ ಜೋನಾಸ್ 'ಆ ನಗು' ಎಂದು ಕಾಮೆಂಟ್ ಮಾಡಿ ಅದಕ್ಕೆ ಹೃದಯದ ಸ್ಟಿಕ್ಕರ್ ಅನ್ನು ಸೇರಿಸಿರುವುದು ಈ ಎಲ್ಲಾ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿರುವುದಂತು ಸುಳ್ಳಲ್ಲ. 

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್