Select Your Language

Notifications

webdunia
webdunia
webdunia
webdunia

ಪತ್ನಿ ಅನುಷ್ಕಾ ಶರ್ಮಾ ಅವರನ್ನು ಬಾಸ್ ಎಂದು ಒಪ್ಪಿಕೊಂಡ ವಿರಾಟ್ ಕೊಹ್ಲಿ...!!

ಅನುಷ್ಕಾ ಶರ್ಮಾ
ಬೆಂಗಳೂರು , ಶುಕ್ರವಾರ, 8 ಜೂನ್ 2018 (13:59 IST)
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ನಿಮಗೆಲ್ಲಾ ತಿಳಿದೇ ಇದೆ. ಇವರಿಬ್ಬರೂ ಮದುವೆಯಾದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಒಂದು ವೀಡಿಯೊ ಮೂಲಕ.
ಹೌದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಫಿಟ್ನೆಸ್-ಐಕಾನ್ ಆಗಿದ್ದು ಎಲ್ಲರಿಗೂ ತಿಳಿದಿರುವುದೇ ಆದರೆ ಅವರ ಅರ್ಧಾಂಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಹ ಫಿಟ್ನೆಸ್‌ನಲ್ಲಿ ಹಿಂದೆ ಬಿದ್ದಿಲ್ಲ. ಈ ಕುರಿತು ಬುಧವಾರ ಕೊಹ್ಲಿ ತಮ್ಮ ವೀಡಿಯೊವೊಂದನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಅದರ ಕೆಳಗೆ "ಒಟ್ಟಿಗೆ ತರಬೇತಿ ಪಡೆದುಕೊಳ್ಳುವುದು ಫಿಟ್‌ನೆಸ್ ಅನ್ನು ಇನ್ನೂ ಉತ್ತಮವಾಗಿಸುತ್ತದೆ!" ಎಂದು ಬರೆದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 
 
ಅಷ್ಟೇ ಅಲ್ಲದೇ ವ್ಯಾಯಾಮಗಳನ್ನು ಮಾಡುತ್ತಿರುವ ಅನುಷ್ಕಾರನ್ನು 'ಬಾಸ್' ಎಂದು ಪರಿಚಯಿಸಿದ್ದಾರೆ ವೀಡಿಯೊದಲ್ಲಿ ಪರಿಚಯಿಸಿದ್ದಾರೆ. ಅದರೊಂದಿಗೆ ಅನುಷ್ಕಾ ನನಗಿಂತ ಹೆಚ್ಚು ಗಂಟೆಗಳ ಕಾಲ ವ್ಯಾಯಾಮ ಮಾಡಬಹುದು ಎಂದು ತಮ್ಮ ಮುದ್ದಿನ ಮಡದಿಯನ್ನು ಹೊಗಳಿಕೊಂಡಿದ್ದಾರೆ.
webdunia
ವಿರಾಟ್ ಫಿಟ್ನೆಸ್ ಕುರಿತು ವೀಡಿಯೊಗಳನ್ನು ಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವು ವೀಡಿಯೊಗಳನ್ನು ಹಾಕಿ ಎಲ್ಲರೂ ತಮ್ಮ ಫಿಟ್ನೆಸ್ ಬಗ್ಗೆ ಗಮನ ನೀಡಬೇಕು ಎಂದು ಜಾಗ್ರತೆ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್