Select Your Language

Notifications

webdunia
webdunia
webdunia
webdunia

ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್

ಇದು ಇಂದಿರಾ ಕ್ಯಾಂಟಿನ್ ಅಲ್ಲ: ಅಮ್ಮ ಕ್ಯಾಂಟಿನ್
ಯಾದಗಿರಿ , ಸೋಮವಾರ, 16 ಜುಲೈ 2018 (15:56 IST)
ಅಲ್ಲಿ ಹತ್ತು ರೂಪಾಯಿಗೆ ಬೆಳಗಿನ ಉಪಹಾರ, ಮದ್ಯಾಹ್ನದ ಊಟ ಸಿಗುತ್ತೆ. ಅಯ್ಯೋ ನೀವು ಇಂದಿರಾ ಕ್ಯಾಂಟಿನ್ ಬಗ್ಗೆ ಹೇಳಿತಾ ಇದ್ದಿರಾ ಅಂತ ಕೇಳಿದ್ರೆ ನಿಮ್ಮ ಊಹೆ ತಪ್ಪು, ಆದರೆ ಇದು ಇಂದಿರಾ ಕ್ಯಾಂಟೀನ್ ಅಲ್ಲ, ಅಮ್ಮನ ನೆನಪಿನ ಬುತ್ತಿ. ಇದರ ಹಿಂದೆ ವಿಶೇಷ ಕಥೆಯೇ ಇದೆ. ಮುಂದೆ ಓದಿ.

ಇದರ ಹೆಸರು ಅಮ್ಮ ಕ್ಯಾಂಟೀನ್. ಹಸಿದವರಿಗಾಗಿ ಇದರ ಧ್ಯೇಯ ವಾಕ್ಯ. ಸಾಲುಗಟ್ಟಿ ನಿಂತ ಜನ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಈ ಚಿತ್ರಣ ಕಂಡುಬರುತ್ತಿದೆ. ರಾಜ್ಯ ಸರಕಾರ ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದ್ರು ಕಡು ಬಡವರು ಇನ್ನು  ಅನ್ನವಿಲ್ಲದೇ ಹಸಿವಿನಿಂದ ಅನ್ನಕ್ಕಾಗಿ ಪರದಾಡುವಂತಾಗಿದೆ. ಈಗಾಗಲೇ ರಾಜ್ಯ ಸರಕಾರ ಬಡವರ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟಿನ್ ಆರಂಭಿಸಿದೆ. ಸರಕಾರ ಕೂಡ ಕಡಿಮೆ ದರಕ್ಕೆ ಅನ್ನ ನೀಡಿ ಆಶ್ರಯವಾಗುತ್ತಿದೆ. ಶಹಾಪುರನಲ್ಲಿ ಸರಕಾರದಿಂದ ಆಗದ ಕೆಲಸವನ್ನು  ಖಾಸಗಿ ವ್ಯಕ್ತಿಗಳು ಮಾಡುತ್ತಿದ್ದಾರೆ. ಶಹಾಪುರನಲ್ಲಿ ಇನ್ನು ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲಯಾದಗಿರಿ ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಮಾನ್ ಹತ್ತಿರ ಮಣಿಕಂಠ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ  ಅಮ್ಮನ ನೆನಪಿಗಾಗಿ ಗುರು ಮಣಿಕಂಠನ ಅವರು ಅಮ್ಮಳಾದ ಲಕ್ಷ್ಮೀ ಅವರ ಪುಣ್ಯಸ್ಮರಣೆ ದಿವಸ ಅಮ್ಮ ಕ್ಯಾಂಟಿನ್ ಆರಂಭಿಸಿದ್ದಾರೆ. ಅವರ ನೆನಪಿಗಾಗಿ ಹಸಿದವರಿಗೆ ಅನ್ನ ನೀಡುವ ಸಂಕಲ್ಪ ತೊಟ್ಟಿದ್ದಾರೆ. ಜನ ಇಲ್ಲಿಗೆ ಬಂದು ತಮ್ಮ ಹಸಿವನ್ನ ನೀಗಿಸಿಕೊಂಡು ಹೋಗುತ್ತಿದ್ದಾರೆ.

ಜನ್ಮದಾತಳ ಸವಿ ನೆನಪಿಗಾಗಿ ಬಡ ಜನರ, ಹಳ್ಳಿಗಳಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಹಸಿವನ್ನು ನಿಗಿಸುವ ಕೆಲಸ ಮಾಡುತ್ತಿದ್ದಾರೆ. ಕ್ಯಾಂಟಿನ್ ನಲ್ಲಿ ಉಪಹಾರ  ಹಾಗೂ ಊಟವನ್ನು ಕಡಿಮೆ ದರಕ್ಕೆ ನೀಡಲಾಗುತ್ತಿದೆ. 10 ರೂ. ಗೆ ಉಪಹಾರ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?