Publish Date: Wed, 11 Jul 2018 (18:42 IST)
Updated Date: Wed, 11 Jul 2018 (18:49 IST)
ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ಮಾಡಬೇಕು ಅನ್ನುವವರು ಈ ತಂಬುಳಿಯನ್ನು ಮಾಡಬಹುದು. ಮನೆಯಲ್ಲಿಯೇ ಸಿಗುವ ವಸ್ತುವಿನಿಂದ ತಂಬುಳಿ ಸಿದ್ಧ.
ಬೇಕಾಗುವ ಸಾಮಾಗ್ರಿ
ಈರುಳ್ಳಿ-2 ದೊಡ್ಡದ್ದು
ಹಸಿಮೆಣಸು-2
ಜೀರಿಗೆ -1 ಚಮಚ
ಎಣ್ಣೆ-1 ಚಮಚ
ಮಜ್ಜಿಗೆ-1 ಸಣ್ಣ ಲೋಟ
ಸ್ವಲ್ಪ ತೆಂಗಿನ ತುರಿ
ಈರುಳ್ಳಿಯನ್ನು ಕತ್ತರಿಸಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಕೆಂಪಗಾಗುವ ತನಕ ಹುರಿಯರಿ. ಅದಕ್ಕೆ ಜೀರಿಗೆಯನ್ನುಸೇರಿಸಿ ಹುರಿಯಿರ. ನಂತರ ತೆಂಗಿನಕಾಯಿ ತುರಿ, ಹಸಿಮೆಣಸನ್ನು ಇದರೊಂದಿಗೆ ಸೇರಿಸಿಕೊಂಡು ಅರೆಯಿರಿ. ಆಮೇಲೆ ಮಜ್ಜಿಗೆ ಬೆರೆಸಿರಿ.ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ