Publish Date: Mon, 21 May 2018 (11:49 IST)
Updated Date: Mon, 21 May 2018 (11:53 IST)
ಬೆಂಗಳೂರು: ಸಾಕಷ್ಟು ಪುರುಷರು ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಪುರುಷರ ವಿಶ್ವಾಸ ಕಡಿಮೆಯಾಗುವುದಲ್ಲದೆ, ಒತ್ತಡ, ಆತಂಕಕ್ಕೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಕೆಲವು ಮನೆಮದ್ದುಗಳಿಂದ ನಿವಾರಿಸಿಕೊಳ್ಳಬಹುದಂತೆ.
ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ: ಈ ಮೂರು ಪದಾರ್ಥಗಳು ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ ಶೀಘ್ರ ಸ್ಖಲನದ ಸಮಸ್ಯೆಗೆ ಪರಿಹಾರ ನೀಡಲಿದೆ. ಬೇಯಿಯಿದ ಮೊಟ್ಟೆ ಅರ್ಧ, ಅದಕ್ಕೆ ನುಣ್ಣಗೆ ಮಾಡಿದ ಕ್ಯಾರೆಟ್ ಸೇರಿಸಿ. ಮೂರು ಟೇಬಲ್ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ತಿಂಗಳು ಪ್ರತಿದಿನ ಇದನ್ನು ಸೇವಿಸಸಬೇಕಂತೆ.
ಶುಂಠಿ ಮತ್ತು ಜೇನುತುಪ್ಪ: ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ. ರಾತ್ರಿ ಮಲಗುವ ಮುನ್ನ ಅರ್ಧ ಟೇಬಲ್ ಸ್ಪೂನ್ ನಷ್ಟು ಶುಂಠಿರಸ ಮತ್ತು ಜೇನುತುಪ್ಪವನ್ನು ಸೇವಿಸಿ
ಹಸಿರು ಈರುಳ್ಳಿಯ ಬೀಜಗಳು: ಈ ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು .ಇದರ ನೀರನ್ನು ಪ್ರತಿದಿನ ಊಟಕ್ಕೆ ಮುನ್ನ ದಿನಕ್ಕೆ ಮೂರು ಬಾರಿ ಸೇವಿಸಬೇಕಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ