Select Your Language

Notifications

webdunia
webdunia
webdunia
webdunia

ತಲೆ ಹೇನಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ತಲೆ ಹೇನಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಶುಕ್ರವಾರ, 4 ಮೇ 2018 (16:03 IST)
ಬೆಂಗಳೂರು: ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆಯ ಜತೆಗೆ ಹೇನುಗಳು ಕೂಡ ಹೆಚ್ಚಾಗುತ್ತದೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ಇದರಿಂದ ಮುಕ್ತಿ ಪಡೆಯಬಹುದು.


ದಿನಾ ತಲೆಗೆ ಸ್ನಾನ ಮಾಡುವವರು ಸ್ನಾನದ ನಂತರ ಕೂದಲು ಕಟ್ಟುವ ಮುನ್ನ ಅದನ್ನು ಚೆನ್ನಾಗಿ ಒಣಗಿಸುವುದನ್ನು ಮರೆಯಬಾರದು. ವಾರಕ್ಕೆ ಎರಡು ಬಾರಿಯಾದರೂ ಹೇನು ಹೆಕ್ಕಲೇಬೇಕು. ಇದಕ್ಕಾಗಿ ಮೃದುವಾದ ಬಾಚಣಿಗೆಯಿಂದ ತಲೆ ಬಾಚಿಕೊಳ್ಳಬೇಕು.


ಬೆಳ್ಳುಳ್ಳಿ ರಸ ಅಥವಾ ಚೆನ್ನಾಗಿ ಜಜ್ಜಿದ ಬೆಳ್ಳುಳ್ಳಿಯನ್ನು ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಳ್ಳಬೇಕು. 30ರಿಂದ 40 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ತೊಳೆಯಬೇಕು. ಇದರೊಂದಿಗೆ ಈರುಳ್ಳಿ ರಸ ಹಾಗೂ ಬಿಳಿ ವಿನಿಗರ್‌ ಮಿಶ್ರಣವನ್ನೂ ಕೂದಲು ಹಾಗೂ ನೆತ್ತಿಗೆ ಹಚ್ಚಿಕೊಳ್ಳಬಹುದು. ಆದರೆ ಇದನ್ನು ಹಚ್ಚಿದ ಒಂದು ಗಂಟೆಗಳ ಕಾಲ ಕೂದಲನ್ನು ಹಾಗೇ ಬಿಡಬೇಕು. ಹೇನು ನಿವಾರಣೆಗೆ ಬೇವಿನ ತೈಲ ಕೂಡಾ ಉತ್ತಮ ಪರಿಹಾರ. ಇದನ್ನು ಹಚ್ಚಿದ ನಂತರ ಎರಡು ಗಂಟೆಗಳ ಕಾಲ ಕೂದಲನ್ನು ಹಾಗೇ ಬಿಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆಯ ನಿವಾರಣೆಯಾಗಬೇಕೆಂದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ