Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಒಬ್ಬ ತಲೆತಿರುಕ ಸಿಎಂ: ಯಡಿಯೂರಪ್ಪ

ಸಿದ್ದರಾಮಯ್ಯ ಒಬ್ಬ ತಲೆತಿರುಕ ಸಿಎಂ: ಯಡಿಯೂರಪ್ಪ
ಬೆಂಗಳೂರು , ಶನಿವಾರ, 28 ಏಪ್ರಿಲ್ 2018 (13:15 IST)
ಗದಗ:  ಗದಗನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ  ಬಿ‌.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಒಬ್ಬ ತಲೆತಿರುಕ ಸಿಎಂಸೋಲಿನ ಭೀತಿಯಿಂದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

 
ಜೈಲುಹಕ್ಕಿಗಳನ್ನು ಪಕ್ಕದಲ್ಲಿಟ್ಟುಕೊಂಡ ಕಾಂಗ್ರೆಸ್ ಸರ್ಕಾರ ಭ್ರಷ್ಟವೆಂದ ಸಿಎಂ ಹೇಳಿಕೆ ವಿಚಾರಕ್ಕೆ ಬಿಎಸ್‌ವೈ ತಿರುಗೇಟು ನೀಡಿದ್ದು ನಮ್ಮ ಬಗ್ಗೆ ಮಾತನಾಡುವ ಸಿಎಮ್ ಸುತ್ತ ಇರುವವರು ಯಾರು? ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
 
ಕಾಂಗ್ರೆಸ್‌ನ ಪ್ರಣಾಳಿಕೆ ಹಾಸ್ಯಾಸ್ಪದ. ಲೋಕಾ ನಿಷ್ಕ್ರೀಯೆಗೊಳಿಸಿದವರು ಪ್ರಣಾಳಿಕೆಯಲ್ಲಿ ಲೋಕಾ ಬಲ ಪಡಿಸೋ ವಿಚಾರ ಹೇಳಿದ್ದಾರೆ. ಸುಳ್ಳು ಭರವಸೆಗಳನ್ನು ರಾಹುಲ್ ಗಾಂಧಿಯಿಂದ  ಹೇಳಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾದಾಮಿಯಲ್ಲಿ ನಮ್ಮ ಅಬ್ಯರ್ಥಿ ಶ್ರೀರಾಮುಲು ಗೆಲುವು ನೂರಕ್ಕೆ ನೂರು ನಿಶ್ಚಿತ. ನಿಂತ ನೆಲ ಕುಸಿತದ ಭಯದಿಂದ ಸಿಎಮ್ ಬದಾಮಿಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.
 
ಮೇ.18 ಅಥವಾ 19 ರಂದು ಪಿಎಮ್ ಮೋದಿ ಸಮ್ಮುಖದಲ್ಲಿ ಲಕ್ಷಾಂತರ ಜನರ ಮದ್ಯೆ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದುಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿ ಶಾಸಕ ರಾಜು ಕಾಗೆ ವಿರುದ್ಧ ತೊಡೆತಟ್ಟಿದ ಪಾಟೀಲ ಬ್ರದರ್ಸ್