Publish Date: Fri, 27 Apr 2018 (17:20 IST)
Updated Date: Fri, 27 Apr 2018 (17:22 IST)
ಹುಬ್ಬಳ್ಳಿ: ಬಳ್ಳಾರಿಯಲ್ಲಿ ಮೈನಿಂಗ್ ಮಾಫಿಯಾ ಮತ್ತೆ ತಲೆ ಎತ್ತಿದೆ.ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಅನೇಕ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.
ಶೆಟ್ಟರ್ ಅವರ ಮೇಲೆ ಐಟಿ ವ ಅಧಿಕಾರಿಗಳು ದಾಳಿ ಮಾಡಿ, ಅವರ ಆಸ್ತಿಯನ್ನ ಪರಿಶೀಲಿಸಬೇಕು. ಭ್ರಷ್ಟ ಅಧಿಕಾರಿಗಳು ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ.ಈ ಮೂರು ಪಕ್ಷಗಳು ಮಹಾ ಬ್ರಷ್ಟ ಹಾಗೂ ಬೇಜವಾಬ್ದಾರಿ ಪಕ್ಷಗಳಾಗಿವೆ. ಈ ಮೂರು ಪಕ್ಷಗಳಿಂದ ರಾಜ್ಯದ ಜನತೆಗೆ ಮಹಾ ದ್ರೋಹವಾಗಿದೆ ಎಂದು ದೂರಿದ್ದಾರೆ.
ಶ್ರೀ ರಾಮುಲು ಆಸ್ತಿ ಅಕ್ರಮ ಆಸ್ತಿ ಆಗಿದೆ, ಅವರು ಅದನ್ನ ಬೆವರು ಹರಿಸಿ ಸಂಪಾದಿಸಿದ ಆಸ್ತಿಯಲ್ಲ.ಈ ರಾಜ್ಯವನ್ನು ಸ್ವಚ್ಛಗೊಳಿಸುವ ಅಧಿಕಾರ ನಮ್ಮ ಜನ್ರಲ್ಲೆ ಇದೆ, ಅದನ್ನು ನಾವು ಮಾಡಬೇಕು.ಹಗಲು ದರೋಡೆಯನ್ನು ತ್ರಿಮೂರ್ತಿ ಪಕ್ಷಗಳು ಮಾಡುತ್ತಿವೆ ಎಂದರು.