Publish Date: Fri, 27 Apr 2018 (14:36 IST)
Updated Date: Fri, 27 Apr 2018 (14:39 IST)
ಜನಾರ್ಧನರೆಡ್ಡಿಗೆ ನಾವು ಟಿಕೆಟ್ ಕೊಟ್ಟಿಲ್ಲ, ಅವರೂ ಕೇಳೂ ಇಲ್ಲ ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜನಾರ್ದನರೆಡ್ಡಿ ಸಹಾಯದಿಂದ 10 ರಿಂದ 15 ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮಗೆ ಸಹಾಯವಾಗೋದಾದ್ರೆ ವಿರೋಧಿಗಳ ನೆರವನ್ನೂ ಪಡೆಯಿರಿ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಬಿಎಸ್ ವತಿಳಿಸಿದರು.
ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ, ಅವರು ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ. ಸಿಎಂಗೆ ಸೋಲೋ ಭೀತಿಯಿಂದ ಏನೇನೋ ಮಾತನಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ವಿಜಯೇಂದ್ರ ಸ್ಪರ್ಧೆಬೇಡ ಎಂಬುದು ರಾಷ್ಟ್ರ ನಾಯಕರ ತೀರ್ಮಾನ. ತಂದೆ ಮಗನ ಸ್ಪರ್ಧೆ ಬೇಡ ಎಂದಿದ್ದಕ್ಕೆ ಈ ತೀರ್ಮಾನ ಮಾಡಲಾಗಿದೆ. ಯುಪಿ ಚುನಾವಣಾ ಫಲಿತಾಂಶ ರಾಜ್ಯದಲ್ಲೂ ಪುನರಾವರ್ತನೆಯಾಗಲಿದೆ.ನಾವು ಈ ಚುನಾವಣೆ ಯನ್ನು ಗಂಭೀರವಾಗಿ ಪರಿಗಣಿದ್ದೇವೆ.ಪ್ರಧಾನಿ ಮೋದಿ ಸೇರಿ ಹಲವು ರಾಜ್ಯಗಳ ಸಿಎಂಗಳು ಪ್ರಚಾರಕ್ಕೆ ಬರಲಿದ್ದಾರೆ ಎಂದಿದ್ದಾರೆ.