Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಟೀಂ ಇಂಡಿಯ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಟೀಂ ಇಂಡಿಯ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್
ಬೆಂಗಳೂರು , ಶುಕ್ರವಾರ, 27 ಏಪ್ರಿಲ್ 2018 (06:57 IST)
ಬೆಂಗಳೂರು : ಫೀಲ್ಡ್ ಗೆ ಇಳಿದು ನಾವು ಕೆಲಸ ಮಾಡಿದ್ದೇವೆ ಎಂದು ತೋರಿಸಬೇಕು. ಆದರೆ ಬಿಜೆಪಿ ನಾಯಕರು ಫಿಲ್ಡ್‍ಗೆ ಇಳಿಯದೇ 100 ರನ್ ಮಾಡಿದ್ದೇವೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಂ ಇಂಡಿಯ ಮಾಜಿ ನಾಯಕ, ಕಾಂಗ್ರೆಸ್ ತಾರಾ ಪ್ರಚಾರಕ ಮೊಹಮ್ಮದ್ ಅಜರುದ್ದೀನ್ ಅವರು ಲೇವಡಿ ಮಾಡಿದರು.


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,’ ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿ ಕೋಮುವಾದ ಸೃಷ್ಟಿಸಲು ಹವಣಿಸುತ್ತಿದ್ದಾರೆ. ಕರ್ನಾಟಕ ಈಗಾಗಲೇ ಅಭಿವೃದ್ಧಿಯಲ್ಲಿದೆ. ಕೇಂದ್ರ ಅಭಿವೃದ್ಧಿಯ ಬಗ್ಗೆ ಗಮನಹರಿಸಲಿ ಬಿಜೆಪಿ ರಾಜ್ಯಗಳ ಆಡಳಿತದಲ್ಲಿ ಏನಿದೆ ಎನ್ನುವುದನ್ನು ನೋಡಲಿ. ಅದನ್ನು ಬಿಟ್ಟು ಅಭಿವೃದ್ಧಿ ವಿಚಾರ ಮುಂದಿಟ್ಟು ದಾರಿತಪ್ಪಿಸುವುದು ಸರಿಯಲ್ಲ. ದೇಶದ ಶಾಂತಿಯನ್ನ ಕದಡುವುದು ಬೇಡ. ಕುಳಿತುಕೊಂಡು ಸುಳ್ಳು ಹೇಳುವ ಬದಲು ಗ್ರೌಂಡ್‍ಗೆ ಹೋಗಿ ಅಲ್ಲಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ. ಅದು ಬಿಟ್ಟು ಸುಳ್ಳನ್ನೇ ಎತ್ತಿ ಎತ್ತಿ ತೋರಿಸಬೇಡಿ ಎಂದು ವಾಗ್ದಾಳಿ ನಡೆಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮತಯಾಚಿಸಿದ್ದು ಇವರಿಗಾಗಿಯಂತೆ!