Select Your Language

Notifications

webdunia
webdunia
webdunia
webdunia

ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಫಿಟ್ಸ್ ನಿಲ್ಲುತ್ತದಾ..?

ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ  ಫಿಟ್ಸ್ ನಿಲ್ಲುತ್ತದಾ..?
ಬೆಂಗಳೂರು , ಭಾನುವಾರ, 20 ಮೇ 2018 (10:19 IST)
ಬೆಂಗಳೂರು : ಮೂರ್ಛೆ ರೋಗ ಹೆಣ್ಣು ಗಂಡು ಎಂಬ ವ್ಯತ್ಯಾಸ ಇಲ್ಲದೆ ಈ ಖಾಯಿಲೆ ಬರುತ್ತದೆ. ಆದರೆ ಮೂರ್ಛೆ ರೋಗ ಬಂದ ವ್ಯಕ್ತಿಗಳ ಕೈಯಲ್ಲಿ ನಮ್ಮ ಪೂರ್ವಿಕರು ಕಬ್ಬಿಣ, ಬೀಗದ ಕೈಯನ್ನೋ ಐರನ್ ರಾಡನ್ನೋ ಕೊಡುತ್ತಿದ್ದರು. ಇದರಿಂದ ಮೂರ್ಛೆ ನಿಲ್ಲುತ್ತದೆ ಎಂಬುದು ಅವರ  ಭಾವನೆ. ಆದರೆ ಇದರಲ್ಲಿ ಸತ್ಯ ಎಷ್ಟು..? ನಿಜವಾಗಿ ಅಂತಹ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ನೀಡಿದರೆ ಮೂರ್ಛೆ ನಿಲ್ಲುತ್ತದಾ…? ಫಿಟ್ಸ್ ನಿಲ್ಲುತ್ತದಾ..? ಎಂಬುದನ್ನು ಈಗ ತಿಳಿದುಕೊಳ್ಳೋಣ.


ಮೂರ್ಛೆ ಬಂದಾಗ ಆ ವ್ಯಕ್ತಿಗಳ ಕೈಯಲ್ಲಿ ಕಬ್ಬಿಣ, ಬೀಗದ ಕೈ, ರಾಡ್‌‌ಗಳನ್ನು ಇಡುವ ಬಗ್ಗೆ ಬಹಳಷ್ಟು ಮಂದಿ ವೈದ್ಯರು ಏನು ಹೇಳುತ್ತಿದ್ದಾರೆಂದರೆ… ಅದು ಎಳ್ಳಷ್ಟೂ ಪ್ರಭಾವ ತೋರುವುದಿಲ್ಲವಂತೆ. ಮೂರ್ಛೆಯನ್ನು ತಡೆಯುವ ಶಕ್ತಿ ಕಬ್ಬಿಣ, ಬೀಗದ ಕೈಗೆ ಇರಲ್ಲವಂತೆ. ಆದರೆ ಯಾರಿಗೇ ಆಗಲಿ ಮೂರ್ಛೆ ಬಂದಾಗ ಅದು 2 ರಿಂದ 5 ನಿಮಿಷಗಳ ಒಳಗೆ ಇರುತ್ತದೆ. ಅಷ್ಟರೊಳಗೆ ಅವರಷ್ಟಕ್ಕೆ ಅವರೇ ಸಾಮಾನ್ಯ ಸ್ಥಿತಿಗೆ ತಲುಪುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಕೈಗೆ ಕಬ್ಬಿಣ, ಬೀಗದ ಕೈ, ರಾಡ್‌ಗಳನ್ನು ಇಟ್ಟರೂ ಪ್ರಯೋಜನ ಇರಲ್ಲ. ಆ ರೀತಿ ಇಟ್ಟರೂ, ಹೇಗೂ ಸ್ವಲ್ಪ ಹೊತ್ತಿಗೆ ಸಾಮಾನ್ಯ ಸ್ಥಿತಿಗೆ ತಲುಪುತ್ತಾರೆ. ಬಹಳಷ್ಟು ಮಂದಿ ಕಬ್ಬಿಣ ಕೆಲಸ ಮಾಡಿತೆಂದು ಭಾವಿಸುತ್ತಾರೆ. ಆದರೆ ಇದರಲ್ಲಿ ಸ್ವಲ್ಪವೂ ನಿಜ ಇಲ್ಲ ಎನ್ನುತ್ತಿದ್ದಾರೆ ನ್ಯೂರೋ ಸರ್ಜನ್ನರು.
ಆದರೆ ಮೂರ್ಛೆ ಬಂದಾಗ ಅಂತಹ ವ್ಯಕ್ತಿಗಳ ಬಗ್ಗೆ ಸ್ವಲ್ಪ ಎಚ್ಚರಿಕೆಗಳನ್ನು ಮಾತ್ರ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಅವೇನೆಂದರೆ… ಮೂರ್ಛೆ ಬಂದಾಗ ರೋಗಿಯನ್ನು ನೆಲದ ಮೇಲೆ ಮಲಗಿಸಬೇಕು. ಫಿಟ್ಸ್‌ನಿಂದ ಒದ್ದಾಡುತ್ತಾ ಅತ್ತಿಂದಿತ್ತ ಜೋರಾಗಿ ಅಲುಗಾಡುತ್ತಿದ್ದರೆ, ಹಾಗೆಯೇ ಬಿಡಬೇಕು. ಅದನ್ನು ನಿಲ್ಲಿಸಬಾರದು. ಒಂದು ವೇಳೆ ನಿಲ್ಲಿಸಿದರೆ ಸಡನ್ ಆಗಿ ಅಟ್ಯಾಕ್ ಆಗುವ ಅವಕಾಶ ಇರುತ್ತದೆ. ಅದೇ ರೀತಿ ಮೂರ್ಛೆ ಬಂದ ರೋಗಿ ಬಾಯಲ್ಲಿ ಎಂತಹ ವಸ್ತುಗಳನ್ನೂ ಇಡಬಾರದು. ವಾಂತಿಯಾಗುತ್ತಿದ್ದರೆ ಮಾಡಿಕೊಳ್ಳಲು ಬಿಡಬೇಕು. ಸೂಕ್ತ ಗಾಳಿ ಆಡುವಂತೆ ನೋಡಿಕೊಳ್ಳಬೇಕು. ಕೂಡಲೆ ವೈದ್ಯರ ಬಳಿಗೆ ಕರೆದೊಯ್ಯಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?