Select Your Language

Notifications

webdunia
webdunia
webdunia
webdunia

ಅಧಿಕಾರ ಸಿಗಲಿ, ಬಿಡಲಿ ವಿರೋಧ ಪಕ್ಷದಲ್ಲಿರಲಿ, ಆಡಳಿತದಲ್ಲಿರಲಿ ಜನರಿಗಾಗಿಯೇ ಪ್ರಾಣ ಕೊಡುತ್ತೇನೆ - ಬಿಎಸ್ ಯಡಿಯೂರಪ್ಪ

webdunia
ಬೆಂಗಳೂರು , ಶನಿವಾರ, 19 ಮೇ 2018 (17:23 IST)
ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಇಂದು ವಿಶ್ವಾಸಮತ ಯಾಚನೆಗೆ ಮುನ್ನವೇ ಸುದೀರ್ಘ ಭಾಷಣ ಮಾಡಿ ‘40 ಸ್ಥಾನಗಳಲ್ಲಿದ್ದ ನಮ್ಮ ಪಕ್ಷವನ್ನು ಜನ 104 ಸ್ಥಾನಗಳಿಗೆ ಏರಿಕೆ ಮಾಡಿದ್ದಾರೆ. ಜನಾದೇಶ ನಮ್ಮ ಪರವಾಗಿತ್ತು. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ನಮಗೆ ಬಹುಮತದ ಕೊರತೆಯಾಗಿತ್ತು. ಇದನ್ನು ನಾವು ಒಪ್ಪುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.


ಇದೇ ವೇಳೆ ಮಾತನಾಡಿದ ಅವರು,’ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಮುಂದಿನ ನನ್ನ ಜೀವನದ ಕೊನೆ ಉಸಿರುವವರೆಗೂ ಈ ರಾಜ್ಯದ ರೈತರ ದೀನದಲಿತರ ಪರವಾಗಿ ಹೋರಾಟ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕೂವರೆ ವರ್ಷದಲ್ಲಿ ಅದ್ಭುತವಾದ ಆಡಳಿತ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಅವರಿಗೆ ಕೊಡುಗೆ ನೀಡುತ್ತೇವೆ ಎಂದು ಹೇಳಿದರು. ವಿಶ್ವಾಸ ಮತ ಯಾಚಿಸದೆ ಜನತಾ ನ್ಯಾಯಾಲಯದ ಮುಂದೆ ಹೋಗಲು ತೀರ್ಮಾನಿಸಿದ್ದೇನೆ. ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್‍ನವರ ಕುತಂತ್ರ ರಾಜಕಾರಣದಿಂದ ನಮಗೆ ಹಿನ್ನಡೆಯಾಗಿದೆ. ಅಧಿಕಾರ ಸಿಗಲಿ, ಬಿಡಲಿ ವಿರೋಧ ಪಕ್ಷದಲ್ಲಿರಲಿ, ಆಡಳಿತದಲ್ಲಿರಲಿ ಜನರಿಗಾಗಿಯೇ ಪ್ರಾಣ ಕೊಡುತ್ತೇನೆ. ನಾನು ಹೋರಾಟದಿಂದ ಬಂದವನು, ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಸಿಎಂ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ