Publish Date: Sat, 19 May 2018 (16:16 IST)
Updated Date: Sat, 19 May 2018 (16:18 IST)
ಬೆಂಗಳೂರು: ಅತ್ತ ವಿಶ್ವಾಸ ಮತ ಕೇಳದೆಯೇ ಬಿಎಸ್ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೊರಟರೆ ಇತ್ತ ಸದನದಲ್ಲಿದ್ದ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಇತರ ಶಾಸಕರೊಂದಿಗೆ ಗೆಲುವಿನ ನಗೆ ಬೀರಿದರು.
ಡಿಕೆಶಿ ಮತ್ತು ಕುಮಾರಸ್ವಾಮಿ ಪರಸ್ಪರ ಕೈ ಎತ್ತಿ ಹಿಡಿದು ಛಾಯಾಗ್ರಾಹಕರಿಗೆ ಗೆಲುವಿನ ಪೋಸ್ ನೀಡಿದರು. ಈ ಸಂದರ್ಭದಲ್ಲಿ ಉಳಿದ ಶಾಸಕರೂ ಅವರ ಜತೆಗೆ ಸೇರಿಕೊಂಡರು.
ಇನ್ನೊಂದೆಡೆ ಯಡಿಯೂರಪ್ಪ ರಾಜಭವನಕ್ಕೆ ತೆರಳುವಾಗ ಗ್ಯಾಲರಿಯಲ್ಲಿ ಕಲಾಪ ವೀಕ್ಷಿಸಲು ಬಂದಿದ್ದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಶೋಭಾ ಕರಂದ್ಲಾಜೆ ಸೇರಿದಂತೆ ನಾಯಕರು ಕೈ ಕುಲುಕಿ ವಿದಾಯ ಕೋರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.