Publish Date: Sat, 19 May 2018 (16:30 IST)
Updated Date: Sat, 19 May 2018 (16:32 IST)
ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಬೆಂಬಲಿಗರಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಾಜಿ ಶಾಸಕ ಎಂ.ಸಿ.ಅಶ್ವಥ್, ಕೆಂಗಲ್ ಆಂಜನೇಯಸ್ವಾಮಿಗೆ 101 ತೆಂಗಿನಕಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುಮಾರಸ್ವಾಮಿ ಸಿಎಂ ಆಗಲೆಂದು ತನ್ನ ಬೆಂಬಲಿಗರೊಂದಿಗೆ ಪೂಜೆಸಲ್ಲಿಸಿದ ಎಂ.ಸಿ.ಅಶ್ವಥ್ ಆಂಜನೇಯ ಸ್ವಾಮಿ ಪಾದದ ಕೆಳಗೆ ಹೆಚ್.ಡಿ.ಕೆ.ಪೋಟೊ ಇಟ್ಟು ಪೂಜೆ ಮಾಡಿಸಿ ತಮ್ಮ ಭಯ ಭಕ್ತಿಯನ್ನು ಮೆರೆದ ಘಟನೆ ವರದಿಯಾಗಿದೆ.