Publish Date: Fri, 18 May 2018 (10:33 IST)
Updated Date: Fri, 18 May 2018 (10:36 IST)
ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ಗುಪ್ತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.
ಸದ್ಯಕ್ಕೆ ಎರಡೂ ಪಕ್ಷದ ಶಾಸಕರೂ ಹೈದರಾಬಾದ್ ನ ಐಷಾರಾಮಿ ಹೋಟೆಲ್ ಗಳಾದ ತಾಜ್ ಕೃಷ್ಣಾ ಮತ್ತು ನೊವೊಟೆಲ್ ನಲ್ಲಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಕರೆದೊಯ್ಯಲು ಸ್ವತಃ ಸಂಸದ ಡಿಕೆ ಸುರೇಶ್ ತೆರಳಿದ್ದಾರೆ.
ಆದರೆ ಜೆಡಿಎಸ್ ಶಾಸಕರ ಜತೆಗೆ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತೆರಳಿಲ್ಲ. ಮೊದಲು ಜೆಡಿಎಸ್ ಶಾಸಕರನ್ನು ಕೇರಳಕ್ಕೆ ಎಚ್ ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಕರೆದೊಯ್ಯಲಾಗುತ್ತದೆ ಎಂದಿತ್ತು. ಆದರೆ ಕೊನೆಗೆ ಹೈದರಾಬಾದ್ ಗೆ ಶಾಸಕರನ್ನು ಕಳುಹಿಸಲಾಗಿದೆಯಾದರೂ ಎಚ್ ಡಿಕೆ ಅಥವಾ ನಿಖಿಲ್ ಜತೆಯಲ್ಲಿ ತೆರಳಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.