Publish Date: Fri, 18 May 2018 (10:23 IST)
Updated Date: Fri, 18 May 2018 (10:28 IST)
ಹೈದರಾಬಾದ್: ಆಪರೇಷನ್ ಕಮಲಕ್ಕೆ ಸಿಲುಕದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ದೂರದ ಹೈದರಾಬಾದ್ ಗೆ ಕರೆದೊಯ್ಯಲಾಗಿದ್ದು, ಅಲ್ಲಿನ ಪಾರ್ಕ್ ಹಯಾತ್ ಹೋಟೆಲ್ ನಲ್ಲಿ ಇರಿಸಲಾಗಿದೆ ಎಂಬ ಸುದ್ದಿ ಬಂದಿತ್ತು.
ಇದೀಗ ಶಾಸಕರನ್ನು ಅಲ್ಲಿಂದಲೂ ಶಿಫ್ಟ್ ಮಾಡಿರುವ ಸುದ್ದಿ ಬಂದಿದೆ. ಹಯಾತ್ ಹೋಟೆಲ್ ನಲ್ಲಿ ಎರಡೂ ಪಕ್ಷದ ಶಾಸಕರನ್ನು ಆರಂಭದಲ್ಲಿ ಕರೆದೊಯ್ಯಲಾಯಿತಾದರೂ ಬಳಿಕ ಅಲ್ಲಿಂದ ಹೋಟೆಲ್ ತಾಜ್ ಕೃಷ್ಣಾಗೆ ಶಿಫ್ಟ್ ಮಾಡಿಸಲಾಗಿದೆ.
ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಶಾಸಕರನ್ನು ಶಿಫ್ಟ್ ಮಾಡಲಾಗಿದೆ. ಹಯಾತ್ ಹೋಟೆಲ್ ನಲ್ಲಿ ಎರಡೂ ಪಕ್ಷಗಳ ಶಾಸಕರು ಉಳಕೊಳ್ಳುವಷ್ಟು ಸ್ಥಳಾವಕಾಶ ಇಲ್ಲದ ಕಾರಣ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.