ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ಗೊಂದಲಗಳಿಂದಾಗಿ ಶಾಸಕರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್, ಹೋಟೆಲ್ ಗೆ ಕರೆದೊಯ್ಯುತ್ತಿದ್ದಾರೆ. ಈ ಬಗ್ಗೆ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ.
									
			
			 
 			
 
 			
					
			        							
								
																	ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಾಗಿ ಕಾಂಗ್ರೆಸ್ ಶಾಸಕರೊಬ್ಬರ ಪತ್ನಿ ಮತ್ತು ಮಗಳ ಜತೆ ಮಾತನಾಡಿದೆ. ಅವರು ತಮ್ಮ ಗಂಡನ ಸುರಕ್ಷತೆಯ ಬಗ್ಗೆ ಭಯಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ರಮ್ಯಾ ಹೇಳಿಕೊಂಡಿದ್ದಾರೆ.
									
										
								
																	‘ಕಾಂಗ್ರೆಸ್ ಶಾಸಕರೊಬ್ಬರ ಮನೆಯವರ ಜತೆ ಮಾತನಾಡಿದೆ. ಅವರ ಮಗಳು ಅಳುತ್ತಾ ತನ್ನ ತಂದೆಯ ಪ್ರಾಣವೇ ಅಪಾಯದಲ್ಲಿದೆ ಎಂದು ಹೇಳುವುದು ನೋಡಿ ನಿಜಕ್ಕೂ ಬೇಸರವಾಯಿತು. ರಾಜಕೀಯ ಈ ಮಟ್ಟಕ್ಕೆ ಬಂದಾಗ ಯಾರಿಗೇ ಆದರೂ ಈ ರೀತಿ ಆಗುವುದು ಸಹಜ’ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.