Publish Date: Sat, 19 May 2018 (11:39 IST)
Updated Date: Sat, 19 May 2018 (11:41 IST)
ಬೆಂಗಳೂರು: ಮಹತ್ವದ ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೆ ಎಲ್ಲಾ ಜೆಡಿಎಸ್ ಸದಸ್ಯರು ಬಂದರೂ ಎಚ್ ಡಿ ರೇವಣ್ಣ ಇನ್ನೂ ಆಗಮಿಸಿರಲಿಲ್ಲ!
ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ಇಂದು ವಿಶ್ವಾಸ ಮತ ಯಾಚನೆ ಸಂಬಂಧ ದಿನವಿಡೀ ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ರೇವಣ್ಣ ಇನ್ನೂ ಕಲಾಪಕ್ಕೆ ಬಾರದೇ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದರಂತೆ! ಕೊನೆಗೆ ತಮ್ಮ ನಂಬಿಕೆಯಂತೆ ಬರಿಗಾಲಲ್ಲಿ ಕಲಾಪಕ್ಕೆ ಹಾಜರಾದರು.
ಉಳಿದಂತೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಸ್ವತಃ ಕುಮಾರಸ್ವಾಮಿ ತಾಕೀತು ಮಾಡಿರುವ ಹಿನ್ನಲೆಯಲ್ಲಿ ಎಲ್ಲಾ ಜೆಡಿಎಸ್ ಸದಸ್ಯರು ಹಾಜರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.