Publish Date: Sat, 19 May 2018 (11:18 IST)
Updated Date: Sat, 19 May 2018 (11:20 IST)
ಬೆಂಗಳೂರು: ವಿಶ್ವಾಸ ಮತ ಯಾಚನೆ ನಡೆಸಲು ಇಂದು ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಆರಂಭವಾಗುತ್ತಿದ್ದಂತೇ ಕಾಂಗ್ರೆಸ್ ಗೆ ಶಾಕ್ ಸಿಕ್ಕಿದೆ.
ಹಂಗಾಮಿ ಸ್ಪೀಕರ್ ಆಗಿ ಕೆಜಿ ಬೋಪಯ್ಯ ಅವರನ್ನು ನೇಮಿಸಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಇದೀಗ ತಾನೇ ತೀರ್ಪು ನೀಡಿದ್ದು, ಸ್ಪೀಕರ್ ಆಯ್ಕೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಕಾಂಗ್ರೆಸ್ ಗೆ ಆರಂಭದಲ್ಲೇ ಹಿನ್ನಡೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.