Select Your Language

Notifications

webdunia
webdunia
webdunia
webdunia

ರಾಜ್ಯಪಾಲರ ವರ್ತನೆ ಖಂಡಿಸಿ ಭಾರಿ ಪ್ರತಿಭಟನೆ

ರಾಜ್ಯಪಾಲರ ವರ್ತನೆ ಖಂಡಿಸಿ ಭಾರಿ ಪ್ರತಿಭಟನೆ
ಬೆಳಗಾವಿ , ಶುಕ್ರವಾರ, 18 ಮೇ 2018 (15:53 IST)
ವಿಧಾನಸಭೆ ಚುನಾವಣೆ ನಂತರ ರಾಜ್ಯ ಸರಕಾರ ರಚನೆ ವಿಚಾರದಲ್ಲಿ ಗವರ್ನರ್ ವಜುಭಾಯಿ ವಾಲಾ ಅಸಂವಿಧಾನಿಕ ಹೆಜ್ಜೆ ಇಟ್ಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಈ ಕೂಡಲೇ ಮಧ್ಯಸ್ಥಿಕೆ ವಹಿಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
 
 ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿ & ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ರವಾಣಿಸಿದರು. 
 
ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ನಿಗದಿತ ಬಹುಮತ ಪಡೆದಿಲ್ಲ. ಬಿಜೆಪಿ ಪಕ್ಷ ಬರೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣಕ್ಕೆ ಬಿಜೆಪಿಗೆ ಕರ್ನಾಟಕ ಗವರ್ನರ್ ವಾಲಾ ಸರಕಾರ ರಚನೆಗೆ ಆಹ್ವಾನ ನೀಡಿರುವುದು ಚಿಂತಾಜನಕ ಎಂದರು.
 
117 ಶಾಸಕರ ಸಂಖ್ಯೆ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಅಲೈನ್ಸ್ ಪಕ್ಷಕ್ಕೆ ಸರಕಾರ ರಚಣೆಗೆ ಅನುವು ಮಾಡದೇ, 104 ಶಾಸಕರ ಸಂಖ್ಯೆಯ ಬಿಜೆಪಿಗೆ ಗವರ್ನರ್ ಅವಕಾಶ ಕೊಟ್ಟಿದ್ದು ಆಕ್ಷೇಪಾರ್ಹ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಇವತ್ತಿಗೂ ಸರಕಾರಿ ಬಸ್ ಬಾರದ ಊರು ಇದೆ ಎಂದ್ರೆ ನಂಬುತ್ತೀರಾ?