Select Your Language

Notifications

webdunia
webdunia
webdunia
webdunia

ಓಂ’ ಬೀಜಾಕ್ಷರ ಪಠಿಸುವುದರಿಂದ ಏನಾಗುತ್ತದೆ ಗೊತ್ತಾ?

ಓಂ’ ಬೀಜಾಕ್ಷರ ಪಠಿಸುವುದರಿಂದ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶನಿವಾರ, 5 ಮೇ 2018 (06:25 IST)
ಬೆಂಗಳೂರು : ಹಿಂದೂಗಳು ಪಠಿಸುವ ಮಂತ್ರಗಳಲ್ಲಿ ‘ ಓಂ’ ಬೀಜಾಕ್ಷರಕ್ಕೆ ಬಹಳ ಪ್ರಾಮುಖ್ಯತೆಯಿದೆ. ಇದನ್ನು ‘ಓಮ್’ ಎಂತಲೂ ಕರೆಯುತ್ತಾರೆ. ಇದನ್ನು ತ್ರಿಮೂರ್ತಿ ಸ್ವರೂಪವೆಂದೂ ಹೇಳುತ್ತಾರೆ. ಅ,ಉ,ಮ ಕಾರಗಳಿಂದ ‘ ಓಂ’ ಹುಟ್ಟಿಕೊಂಡಿದೆ. ಇದನ್ನು ಪಠಿಸುವುದರಿಂದ ಕುಂಡಲಿನೀ ಶಕ್ತಿ ಜಾಗೃತಗೊಳ್ಳುತ್ತದೆ.


1. ಪ್ರತಿನಿತ್ಯವೂ ಓಂ ಅನ್ನು ಧ್ಯಾನದಲ್ಲಿ ಉಚ್ಛರಿಸುವುದರಿಂದ ಬಹಳಷ್ಟು ಶಕ್ತಿ ಉದ್ಭವಿಸುತ್ತದೆ. ಒಂದು ಹಂತದಲ್ಲಿ ಅಧ್ಯಾತ್ಮಿಕ ಸ್ಥಾಯಿ ಅಧಿಕಗೊಂಡು ನಮ್ಮ ಆತ್ಮ ದೈವತ್ವದೊಂದಿಗೆ ವಿಲೀನಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಪಾಸಿಟಿವ್ ಕಂಪನಗಳು ಉಂಟಾಗಿ ಅನಾರೋಗ್ಯದಿಂದ ಮುಕ್ತವಾಗುತ್ತದೆ.


2. ಓಂ ಉಚ್ಛರಿಸುವುದರಿಂದ ದೇಹಕ್ಕೆ ಆಮ್ಲಜನಕ ಹಾಗೂ ರಕ್ತದ ಪೂರ್ಯಕೆ ಸರಿಯಾಗಿ ಆಗುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ. ಒತ್ತಡ,ಆತಂಕ ದೂರವಾಗುತ್ತದೆ.


3. ಖಿನ್ನತೆಗೆ ಒಳಗಾಗಿರುವವರು ಪ್ರತೀ ನಿತ್ಯ ಓಂ ಉಚ್ಛರಿಸುವುದರಿಂದ ಹೊಸ ಶಕ್ತಿ ಬರುತ್ತದೆ. ಉತ್ಸಾಹ ಮೂಡುತ್ತದೆ. ಚುರುಕಾಗಿ ಎಲ್ಲಾ ಕೆಲಸಗಳನ್ನು ಸುಗಮವಾಗಿ ಮಾಡಬಹುದು.


4. ಮಿದುಳಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಆಲೋಚನಾ ಶಕ್ತಿ ವೃದ್ಧಿಸುತ್ತದೆ. ಹೊಸ ಆವಿಷ್ಕಾರಗಳನ್ನು ಮಾಡಲು ಸಹಕಾರಿಯಾಗುತ್ತದೆ. ಚುರುಕಾಗಿ ಆಲೋಚಿಸುತ್ತಾರೆ.


5. ಏಕಾಗ್ರತೆ ಹೆಚ್ಚುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನ ಮಟ್ಟಕ್ಕೆ ಏರಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ.

6. ಓಂ ಪಠಿಸುವುದರಿಂದ ಶರೀರ ಲವಲವಿಕೆಯಿಂದಿರುತ್ತದೆ. ಮನಸ್ಸು ಹತೋಟಿಯಲ್ಲಿರುತ್ತದೆ. ಅನವಶ್ಯಕ ಆಲೋಚನೆಗಳು ಬರುವುದಿಲ್ಲ.

7. ಶರೀರದಲ್ಲಿ ಸೇರಿಕೊಂಡಿರುವ ವಿಷಪದಾರ್ಥಗಳು ಹೊರದೂಡಲ್ಪಡುತ್ತವೆ. ಶರೀರವು ಅಂತರಂಗದಿಂದ ಶುಭ್ರವಾಗುತ್ತದೆ. ಚರ್ಮ ಕಾಂತಿಯುತವಾಗುತ್ತದೆ.

9. ಸ್ವರ ಪೆಟ್ಟಿಗೆಯ ಸಮಸ್ಯೆ ಉಳ್ಳವರು, ಓಂ ಉಚ್ಛರಿಸಿದರೆ, ಸಮಸ್ಯೆ ನಿವಾರಣೆ ಆಗುತ್ತದೆ. ಸ್ವರ ಇಂಪಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಕೆಟ್ಟ ಕನಸು ಬೀಳಬಾರದೆಂದಿದ್ದರೆ ಹೀಗೆ ಮಾಡಿ