Select Your Language

Notifications

webdunia
webdunia
webdunia
webdunia

ರಾತ್ರಿ ಕೆಟ್ಟ ಕನಸು ಬೀಳಬಾರದೆಂದಿದ್ದರೆ ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸು ಬೀಳಬಾರದೆಂದಿದ್ದರೆ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 4 ಮೇ 2018 (06:13 IST)
ಬೆಂಗಳೂರು : ಕೆಲವರಿಗೆ ನಿತ್ಯ ಕನ್ನಿಷ್ಟ 8 ಗಂಟೆಗಳ ಅಲ್ಲ, 6 ಗಂಟೆ ಸಹ ಗುಣಮಟ್ಟದಿಂದ ಕೂಡಿದ ನಿದ್ದೆ ಮಾಡಲಾಗುತ್ತಿಲ್ಲ. ಕೆಲಸದ ಒತ್ತಡ, ಅನಾರೋಗ್ಯ ಸಮಸ್ಯೆಗಳ ಕಾರಣ ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇನ್ನೂ ಕೆಲವರಿಗೆ ರಾತ್ರಿ ಕೆಟ್ಟ ಕನಸುಗಳು ಬೀಳುವುದರಿಂದ ಅವರ ನಿದ್ದೆ ಹಾಳಾಗುತ್ತದೆ.ಇದರಿಂದ  ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಆದರೆ ಕೆಳಗೆ ನಾವು ಕೊಟ್ಟಂತಹ ಸೂಚನೆಗಳನ್ನು ಪಾಲಿಸಿದರೆ ನಿದ್ದೆಯನ್ನು ಚೆನ್ನಾಗಿ ಮಾಡಬಹುದು. ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.


*ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಹಾಸಿಗೆಗೆ ಹೊರಳಿದ ಕೂಡಲೆ ನಿದ್ದೆಗೆ ಜಾರುತ್ತೀರ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಯಾಗಿ ನಿದ್ರಿಸಬಹುದು

*ಒಂದು ರಾಗಿಯನ್ನು  ಚೆಂಬು ಅಥವಾ ಪಾತ್ರೆ, ಗ್ಲಾಸ್‌ನಲ್ಲಿ ನೀರು ತುಂಬಿಡಬೇಕು. ಬಳಿಕ ಅದನ್ನು ದಿಂಬಿನ ಪಕ್ಕ ಟೇಬಲ್ ಮೇಲೆ ಇಟ್ಟುಕೊಂಡು ನಿದ್ರಿಸಬೇಕು. ಈ ರೀತಿ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ವಾಸ್ತುದೋಷ ನಿವಾರಣೆಯಾಗುತ್ತದೆ. ಕೆಟ್ಟ ಕನಸು ಬೀಳಲ್ಲ. ಆದರೆ ಈ ರೀತಿ ಇಟ್ಟುಕೊಂಡ ನೀರನ್ನು ಕುಡಿಯಬಾರದು. ಗಿಡಗಳಿಗೆ ಹಾಕಿದರೆ ಒಳ್ಳೆಯದಾಗುತ್ತದೆ

*ನಿದ್ರಿಸುವ ಹಾಸಿಗೆ ಸಮೀಪವೇ ಚಪ್ಪಲಿ, ಬೂಟುಗಳನ್ನು ಬಿಡಬಾರದು. ಅದೇ ರೀತಿ ಅವುಗಳನ್ನು ಇಡುವ ರ್‍ಯಾಕ್ಸ್ ಸಹ ಹಾಸಿಗೆಯಿಂದ ದೂರ ಇಡಬೇಕು. ಅವುಗಳನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಳ್ಳಬಾರದು. ಇಟ್ಟರೆ ನೆಗಟೀವ್ ಎನರ್ಜಿ ಪ್ರಸಾರವಾಗುತ್ತದೆ. ಅದು ವಾಸ್ತು ದೋಷಗಳನ್ನು ಉಂಟು ಮಾಡುತ್ತದೆ. ನಿದ್ದೆಗೆ ಭಂಗವಾಗುತ್ತದೆ. ದುಃಸ್ವಪ್ನಗಳು ಬೀಳುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವನು ಹುಲಿ ಚರ್ಮ ಧರಿಸಲು ಕಾರಣವೇನು ಗೊತ್ತಾ…?